Wednesday, May 15, 2024
Homeಕರಾವಳಿಸರ್ಕಾರ ದೈವಸ್ಥಾನವನ್ನು ಧಾರ್ಮಿಕ ಪರಿಷತ್ ನಿಂದ ಹೊರ ತರಬೇಕು; ರಮಾನಾಥ ರೈ

ಸರ್ಕಾರ ದೈವಸ್ಥಾನವನ್ನು ಧಾರ್ಮಿಕ ಪರಿಷತ್ ನಿಂದ ಹೊರ ತರಬೇಕು; ರಮಾನಾಥ ರೈ

spot_img
- Advertisement -
- Advertisement -

ಮಂಗಳೂರು: ತುಳುನಾಡಿನಲ್ಲಿ ದೈವಾರಾಧನೆ ಮತ್ತು ತುಳುವರ ಸಂಬಂಧ ತಾಯಿ ಮಗುವಿನ ಹೊಕ್ಕಳ ಬಳ್ಳಿಯ ರೀತಿ ಇದ್ದಂತೆ ಎಂದು ಎಂದು ರಮಾನಾಥ ರೈ ಹೇಳಿದ್ದಾರೆ.

ದೈವರಾಧನೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ದೈವರಾದನೆಯನ್ನು ಧಾರ್ಮಿಕ ಪರಿಷತ್ತಿನ ಅಡಿಯಲ್ಲಿ ಸೇರಿಸಲಾಗುತ್ತಿದೆ. ಸರ್ಕಾರದ ಹೊಸ ಆದೇಶದಂತೆ ಭಂಡಾರ ದೇವಸ್ಥಾನಕ್ಕೆ ಹೋದರೆ ಮತ್ತೆ ವಾಪಸು ತೆಗಿಲಿಕ್ಕಿಲ್ಲ. ತುಳುನಾಡಿನಲ್ಲಿ ದೈವದ ಭಂಡಾರವನ್ನು ದೇವಸ್ಥಾನದಲ್ಲಿ ಇಡುವ ಸಂಸ್ಕೃತಿ ಇಲ್ಲ. ಆದರೆ ಧಾರ್ಮಿಕ ಪರಿಷತ್ತಿನವರ ಹಸ್ತಕ್ಷೇಪದಿಂದಾಗಿ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಮೊಗರ್ನಾಡು ಸೀಮೆಯ ದೈವಸ್ಥಾನದ ಭಂಡಾರವನ್ನು ಭಂಡಾರದ ಮನೆಯ ಬದಲು ದೈವಸ್ಥಾನದಲ್ಲೇ ಇಡಲು ತೀರ್ಮಾನಿಸಿರುವುದು ತುಳುನಾಡಿನ ಜನರ ಅನಾಧಿಕಾಲದ ಧಾರ್ಮಿಕ ನಂಬಿಕೆಗೆ ಮಾಡಿದ ಅಪಚಾರ ಎಂದರು.

ಪೂರ್ವಜರಿಂದ ಬಂದಂತೆಯೇ ದೈವದ ಭಂಡಾರವನ್ನು ನಡೆಸಿಕೊಂಡು ಹೋಗಬೇಕು. ಆದರೆ ಇದೀಗ ಸರ್ಕಾರದ ಈ ಆದೇಶ ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ ಎಂದರು .ದೈವಸ್ಥಾನವನ್ನು ಸರ್ಕಾರ ಧಾರ್ಮಿಕ ಪರಿಷತ್ ನಿಂದ ಹೊರ ತರಬೇಕು. ಇಲ್ಲಿ ಯಾವುದೇ ರಾಜಕೀಯಗಳಿಲ್ಲ ಕೇವಲ ಧಾರ್ಮಿಕ ನಂಬಿಕೆ ವಿಚಾರ ಎಂದರು.

ಜಿಲ್ಲೆಯ ಧಾರ್ಮಿಕ ಪರಿಷತ್ ನ ಸದಸ್ಯರುಗಳ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಬೇಕು. ಧಾರ್ಮಿಕ ನಂಬಿಕೆಗೆ ಈ ಸದಸ್ಯರು ದಕ್ಕೆ ಆಗುವಂತೆ ಮಾಡಿದ್ದಾರೆ. ತಲೆ ಮಾರಿನಿಂದ ಬಂದ ವಿಧಿಯನ್ನೇ ಬದಲಾಯಿಸಲು ಹೊರಟಿದ್ದಾರೆ. ದೈವರಾಧಕರು ಎಲ್ಲರೂ ಇದನ್ನು ಖಂಡಿಸಬೇಕು ಎಂದರು.

ಮೊಗರ್ನಾಡಿನಲ್ಲಾದ ಅಪಚಾರ ಮುಂದೆ ಬೇರೊಂದು ದೈವಸ್ಥಾನಕ್ಕೆ ಆಗುವ ಮುಂಚೆ ಖಂಡಿಸಬೇಕು ಎಂದರು. ಜನತೆ ಎಚ್ಚೆತ್ತು ಎಲ್ಲರೂ ಸರ್ಕಾರದ ಈ ಆದೇಶದಿಂದ ದೈವಗಳ ಭಂಡಾರ ಬರುವುದು ನಿಲ್ಲುತ್ತದೆ. ನಿತ್ಯ ದೈವರಾಧನೆ ಕಾರ್ಯಗಳೂ ನಿಲ್ಲುತ್ತದೆ. ದೈವಸ್ಥಾನ ಯಾವುದೇ ಪ್ರವಾಸಿ ಕೇಂದ್ರ ಅಲ್ಲ ಅದು ಲಕ್ಷಾಂತರ ಜನರ ಆರಾಧನಾ ಕೇಂದ್ರಗಳು ಎಂದು ರಮಾನಾಥ ರೈ ಹೇಳಿದರು.

- Advertisement -
spot_img

Latest News

error: Content is protected !!