- Advertisement -
- Advertisement -
ಪುತ್ತೂರು; ಪ್ರೇತ ಮದುವೆಗೆ ವರ ಬೇಕೆಂದು ನೀಡಿದ ಜಾಹೀರಾತೊಂದು ಕರಾವಳಿಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕುಟುಂಬವೊಂದು 30 ವರ್ಷಗಳ ಹಿಂದೆ ತೀರಿಹೋಗಿರುವ ಮಗಳಿಗೆ ಜೋಡಿ ಪ್ರೇತ ವಿವಾಹಕ್ಕೆ ವರನನ್ನು ಹುಡುಕುತ್ತಿದೆ.ಆದರೆ ವರ ಸಿಗದೇ ಇದ್ದಾಗ ಜಾಹೀರಾತಿನ ಮೊರೆ ಹೋಗಿದೆ.
ಅದರಂತೆ ನೀಡಿರುವ ಜಾಹೀರಾತು ಇಂತಿದೆ “ತಮ್ಮ ಮಗಳು 30 ವರ್ಷಗಳ ಹಿಂದೆ ನಿಧನಗೊಂಡಿದ್ದು, ನಮಗೆ 30 ವರ್ಷಗಳ ಹಿಂದೆ ನಿಧನರಾದ ವರನ ಅಗತ್ಯವಿದೆ. ಅಂತಹ ಯಾವುದೇ ವರನಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ” ಎಂದು ಪತ್ರಿಕೆಯೊಂದಕ್ಕೆ ಜಾಹೀರಾತನ್ನು ನೀಡಿದ್ದಾರೆ. ಇದೀಗ ಜಾಹೀರಾತು ವೈರಲ್ ಆಗಿದ್ದು ವರ ಇರೋದಾಗಿ ಅವರಿಗೆ 50ಕ್ಕೂ ಹೆಚ್ಚು ಕರೆಗಳು ಬಂದಿವೆ ಎನ್ನಲಾಗಿದೆ.
- Advertisement -