Thursday, June 4, 2026
Homeತಾಜಾ ಸುದ್ದಿಕಾಂಗ್ರೆಸ್ ತೊರೆದು ಎಎಪಿ ಸೇರಿದ ಡಿ ಕೆ ಶಿವಕುಮಾರ್ ಸಹೋದರಿ ಪತಿ ಸಿ.ಪಿ. ಶರತ್ ಚಂದ್ರ

ಕಾಂಗ್ರೆಸ್ ತೊರೆದು ಎಎಪಿ ಸೇರಿದ ಡಿ ಕೆ ಶಿವಕುಮಾರ್ ಸಹೋದರಿ ಪತಿ ಸಿ.ಪಿ. ಶರತ್ ಚಂದ್ರ

- Advertisement -
- Advertisement -

 ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರಿಯ ಪತಿ ಸಿ.ಪಿ.ಶರತ್‍ ಚಂದ್ರ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

ಎಎಪಿ ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಚಂದ್ರು ಅವರ ಸಮ್ಮುಖದಲ್ಲಿ ಅವರು ಎಎಪಿಪಕ್ಷ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಸಿ.ಪಿ.ಶರತ್ ಚಂದ್ರರವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗುತ್ತಿರುವುದು ಚನ್ನಪಟ್ಟಣ ಭಾಗದಲ್ಲಿನ ಪಕ್ಷದ ಸಂಘಟನೆಗೆ ಆನೆಬಲ ಬಂದಂತಾಗಿದೆ ಎಂದು ಹೇಳಿದ್ದಾರೆ.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಸಿ.ಪಿ.ಶರತ್ ಚಂದ್ರ, ಆಮ್ ಆದ್ಮಿ ಪಾರ್ಟಿಯು ನನ್ನ ಆಲೋಚನೆ ಮತ್ತು ವಿಚಾರಗಳಿಗೆ ಸರಿಯಾಗಿ ಇದೆ.ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಹೇಳಿದ್ದಾರೆ.

- Advertisement -

Latest News

error: Content is protected !!