Tuesday, July 14, 2026
Homeಕರಾವಳಿಪುತ್ತೂರು: ತನ್ನ ಲವರ್ ಜೊತೆ ಮಾತನಾಡುತ್ತಿದ್ದಾಗ ಆಕೆಯ ಹಳೆ ಪ್ರಿಯಕರನಿಂದ ಯುವಕನ ಮೇಲೆ ಹಲ್ಲೆ

ಪುತ್ತೂರು: ತನ್ನ ಲವರ್ ಜೊತೆ ಮಾತನಾಡುತ್ತಿದ್ದಾಗ ಆಕೆಯ ಹಳೆ ಪ್ರಿಯಕರನಿಂದ ಯುವಕನ ಮೇಲೆ ಹಲ್ಲೆ

- Advertisement -
- Advertisement -

ಪುತ್ತೂರು: ತನ್ನ ಲವರ್ ಜೊತೆ ಮಾತನಾಡುತ್ತಿದ್ದ ವೇಳೆ ಆಕೆಯ ಹಳೇ ಪ್ರಿಯಕರ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನಲ್ಲಿ ನಡೆದ ಕೋಟಿ ಚೆನ್ನಯ ಜೋಡು ಕೆರೆ ಕಂಬಳ ವೀಕ್ಷಿಸಲು ಮಂಗಳೂರಿನ ಕೋಡಿಕಲ್ ನಿವಾಸಿ ಸಾಗರ್ ಎಂಬ ಯುವಕ ಬಂದಿದ್ದ. ಈತ ಕಂಬಳದ ಗದ್ದೆಯಲ್ಲಿ ತನ್ನ ಪ್ರೇಯಸಿ ಜೊತೆ ಮಾತನಾಡುತ್ತಿದ್ದಾಗ ಆಕೆಯ ಮಾಜಿ ಪ್ರಿಯಕರ ತನ್ನ ಗೆಳೆಯರ ಜತೆ ಬಂದು ಬೆದರಿಕೆ ಒಡ್ಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ ಎಂದು ಸಾಗರ್ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.ಅದರಂತೆ ಕೌಶಿಕ್‌, ಯಜ್ಞೆಶ್, ಕೇಶವ, ಸೃಜನ್‌, ವಿನೀತ್‌, ಲತೇಶ್‌, ಮನ್ವಿತ್‌, ಮೋಹಿತ್‌ ಹಾಗೂ ಹೇಮಂತ್‌ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಭಾನುವಾರ ಮಧ್ಯಾಹ್ನ ತಾನು ಕಂಬಳ ಗದ್ದೆಯಲ್ಲಿ ಪ್ರೇಯಸಿಯ ಜತೆ ಮಾತನಾಡುತ್ತಿದ್ದಾಗ ಕೌಶಿಕ್‌ ಎಂಬಾತ ಬಂದು ನೀನು ಯಾರು, ಎಲ್ಲಿಯವ, ನಿನಗೂ ಆಕೆಗೂ ಏನು ಸಂಬಂಧ ಎಂದು ಕೇಳಿದ್ದಾನೆ. ತಾನು ಆಕೆಯ ಪ್ರಿಯತಮ ಎಂದು ಹೇಳಿದಾಗ ಆರೋಪಿಗಳು ಕಂಬಳ ಗದ್ದೆಯಿಂದ ನಿರ್ಜನ ಪ್ರದೇಶವೊಂದಕ್ಕೆ ನನ್ನನ್ನು ಹಾಗೂ ನನ್ನ ಗೆಳೆಯ ದುರ್ಗಾಪ್ರಸಾದ್ ನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಆಕೆಯನ್ನು ಪ್ರೀತಿಸಬಾರದು ಎಂದು ಹೇಳಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!