Monday, June 8, 2026
Homeತಾಜಾ ಸುದ್ದಿಅರಣ್ಯ ಸಚಿವ ಆನಂದ್​ ಸಿಂಗ್​ರನ್ನು ಭೇಟಿ ಮಾಡಲು ಬಂದ ಮೊಸಳೆ ಸೆರೆ..!

ಅರಣ್ಯ ಸಚಿವ ಆನಂದ್​ ಸಿಂಗ್​ರನ್ನು ಭೇಟಿ ಮಾಡಲು ಬಂದ ಮೊಸಳೆ ಸೆರೆ..!

- Advertisement -
- Advertisement -

ಬಳ್ಳಾರಿ: ಅರಣ್ಯ ಸಚಿವ ಆನಂದ್​ ಸಿಂಗ್​ರನ್ನು ಭೇಟಿಯಾಗಲು ಬಂದ ಮೊಸಳೆಯೊಂದು ಸೆರೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೊಸಪೇಟೆಯಲ್ಲಿರುವ ಆನಂದ ಸಿಂಗ್ ಅವರ ಬೃಹತ್ ಬಂಗಲೆ ಮುಂದೆಯೇ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.

ಮೊಸಳೆ ಇರುವ ಮಾಹಿತಿ ಅರಿತ ಕಮಲಾಪುರದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಮೊಸಳೆ ಝೂಲಾಜಿಕಲ್ ಪಾರ್ಕ್‍ಗೆ ಕೊಂಡೊಯ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಆನಂದ್ ಸಿಂಗ್ ಮನೆಯ ಮುಂದೆ ಹೆಚ್​ಎಲ್​ಸಿ ಕಾಲುವೆ ಇದೆ. ತಡರಾತ್ರಿ ಕಾಲುವೆಯಿಂದ ಮೊಸಳೆಯು ಮನೆಯ ಮುಂಭಾಗದ ರಸ್ತೆ ಮೇಲೆ ಬಂದಿದೆ. ಇನ್ನೂ ಮೂರು ಮೊಸಳೆ ಕಾಲುವೆಯಲ್ಲಿ ಇದ್ದು, ಅರಣ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.

- Advertisement -

Latest News

error: Content is protected !!