Friday, May 10, 2024
Homeಇತರಕೊರೋನಾ ಪಾಸಿಟಿವ್ ವರದಿ ಕಂಡು ಸೋಂಕಿತ ವ್ಯಕ್ತಿ ಎಸ್ಕೇಪ್

ಕೊರೋನಾ ಪಾಸಿಟಿವ್ ವರದಿ ಕಂಡು ಸೋಂಕಿತ ವ್ಯಕ್ತಿ ಎಸ್ಕೇಪ್

spot_img
- Advertisement -
- Advertisement -

ಬೆಂಗಳೂರು: ಕೊರೋನಾ ಸೋಂಕಿನ ಶಂಕೆಯಿಂದ ಬೆಂಗಳೂರಿನ ಬೊಮ್ಮನಹಳ್ಳಿಯ ವ್ಯಕ್ತಿಯೊಬ್ಬನನ್ನು ಆರೋಗ್ಯ ಅಧಿಕಾರಿಗಳು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಿದ್ದರು. ಇಂತಹ ವ್ಯಕ್ತಿಯ ಗಂಟಲು ಮಾದರಿಯ ಲ್ಯಾಬ್ ವರದಿ ಆರೋಗ್ಯ ಅಧಿಕಾರಿಗಳ ಕೈ ಸೇರಿದ್ದು, ಆ ವ್ಯಕ್ತಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು., ಈ ವಿಷಯ ಕೊರೋನಾ ಸೋಂಕಿತ ವ್ಯಕಿಗೆ ತಿಳಿಯುತ್ತಿದ್ದಂತೆ ಎಸ್ಕೇಫ್ ಆಗಿದ್ದಾನೆ.

ಗಂಟಲು ಮಾದರಿಗಳ ತಪಾಸಣೆಗೆ ಕಳುಹಿಸುವಾಗಲೇ ಆ ವ್ಯಕ್ತಿಯ ಬಳಿ ಬಿಬಿಎಂಪಿ ಸಿಬ್ಬಂದಿಗಳು, ಆರೋಗ್ಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಊರು ಬಿಟ್ಟು ಹೋಗಬಾರದೆಂದು ಹೇಳಿದ್ದರು. ಆದರೆ ಇದೀಗ ಕೊರೋನಾ ಸೋಂಕಿತ ಅಧಿಕಾರಿಗಳ ಕಣ್ ತಪ್ಪಿಸಿ ನಾಪತ್ತೆಯಾಗಿದ್ದಾನೆ.

ಈ ವಿಷಯ ಬೊಮ್ಮನಹಳ್ಳಿಯ ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಕಣ್ಮರೆಯಾದ ವ್ಯಕ್ತಿಯ ಬಗ್ಗೆ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿಗಳು, ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಕೆಲದಿನಗಳ ಹಿಂದೆ ಕೊರೋನಾ ಶಂಕಿತರು, ಹೊರ ರಾಜ್ಯದಿಂದ ಬಂದವರು ಎನ್ನುವ ಕಾರಣಕ್ಕಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದಂತ 7 ತಬ್ಲಿಘಿಗಳು ಬೆಂಗಳೂರಿನಿಂದ ನಾಪತ್ತೆಯಾಗಿದ್ದಾರೆ.

- Advertisement -
spot_img

Latest News

error: Content is protected !!