Saturday, June 6, 2026
Homeತಾಜಾ ಸುದ್ದಿಕೊರೊನಾ ಸೋಂಕಿತೆಯನ್ನು ಕರೆದೊಯ್ಯಲು ಆ್ಯಂಬುಲೆ ನ್ಸ್ ಬಂದಾಗ ಆಕೆ ಮಾಡಿದ್ದೇನು ಗೊತ್ತಾ?

ಕೊರೊನಾ ಸೋಂಕಿತೆಯನ್ನು ಕರೆದೊಯ್ಯಲು ಆ್ಯಂಬುಲೆ ನ್ಸ್ ಬಂದಾಗ ಆಕೆ ಮಾಡಿದ್ದೇನು ಗೊತ್ತಾ?

- Advertisement -
- Advertisement -

ದಾವಣಗೆರೆ ಕೊರೊನಾ. ಸದ್ಯ ವಿಶ್ವವನ್ನೇ ಆಳುತ್ತಿರುವ ಸರ್ವಾಧಿಕಾರಿ ಅಂದ್ರೆ ತಪ್ಪಾಗಲಾರದು. ಕರ್ನಾಟಕದಲ್ಲಂತೂ ಕೋವಿಡ್ ಆರ್ಭಟ ಹೇಳ ತೀರದು. ದಿನ ದಿನಕ್ಕೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಸರ್ಕಾರ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ, ಸುಮ್ ಸುಮ್ನೆ ಓಡಾಡ್ಬೇಡಿ ಅಂತಾ ಎಷ್ಟೇ ಹೇಳಿದ್ರೂ ಜನಕ್ಕೆ ಮಾತ್ರ ಬುದ್ಧಿ ಬಂದಿಲ್ಲ. ಮನೆ ಬಾಗಿಲಿಗೆ ಬಂದು ಎಚ್ಚರವಾಗಿರಿ ಅಂತಾ ಹೇಳಿದ್ರೂ ಡೋಂಟ್ ಕೇರ್.

ಹೀಗಿರುವಾಗ ದಾವಣಗೆರೆಯ ಹೊನ್ನಾಳಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಕೊರೊನಾ ಸೋಂಕಿತ ಮಹಿಳೆಯನ್ನು ಕರೆದುಕೊಂಡು ಹೋಗೋದಕ್ಕೆ ಅಂತಾ ಆಕೆಯ ಮನೆ ಬಾಗಿಲಿಗೆ ಆ್ಯಂಬುಲೆನ್ಸ್ ಬಂದಿದೆ. ಅಷ್ಟೊತ್ತು ಸರಿ ಇದ್ದ ಮಹಿಳೆ ಆ್ಯಂಬುಲೆನ್ಸ್ ಬರ್ತಾ ಇದ್ದಂತೆ ಡ್ರಾಮಾ ಶುರು ಮಾಡಿದ್ದಾಳೆ. ತನ್ನ ಮೈ ಮೇಲೆ ದೆವ್ವ ಬಂದಂತೆ ನಟಿಸೋದಕ್ಕೆ ಶುರು ಮಾಡಿದ್ದಾಳೆ. ನಾನು ಬರೋದಿಲ್ಲ ಅಂತಾ ಹಠ ಹಿಡಿದಿದ್ದಾಳೆ. ಏನೇ ಮಾಡಿದ್ರೂ ಆಕೆ ಆ್ಯಂಬುಲೆನ್ಸ್ ಹತ್ತಿಲ್ಲ. ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದಾಗ ಆಕೆ ಮೈ ಮೇಲಿದ್ದ ದೆವ್ವ ತನ್ನಿಂದ ತಾನೇ ಬಿಟ್ಟೋಗಿ ಸದ್ದಿಲ್ಲದೇ ಆ್ಯಂಬುಲೆನ್ಸ್ ಹತ್ತಿದ್ದಾಳೆ.

ಕೊರೊನಾ‌ ಸೋಂಕಿತೆಯನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಬಂದಾಗ ಆಕೆ ಮಾಡಿದ ಡ್ರಾಮಾ‌ ನೋಡಿ…

Posted by Maha Xpress on Friday, 21 August 2020

- Advertisement -

Latest News

error: Content is protected !!