Thursday, May 16, 2024
Homeಮನರಂಜನೆಈ ಬಾರಿ ಹಬ್ಬಕ್ಕೆ ಕರಾವಳಿಯ ಸ್ಪೆಷಲ್ ತಯಾರಿಸಿದ ರಾಧಿಕಾ ಪಂಡಿತ್

ಈ ಬಾರಿ ಹಬ್ಬಕ್ಕೆ ಕರಾವಳಿಯ ಸ್ಪೆಷಲ್ ತಯಾರಿಸಿದ ರಾಧಿಕಾ ಪಂಡಿತ್

spot_img
- Advertisement -
- Advertisement -

ಬೆಂಗಳೂರು : ನಟಿ ರಾಧಿಕಾ ಪಂಡಿತ್ ಅವರು ಸದ್ಯ ಪಕ್ಕಾ ಗೃಹಿಣಿ. ಇಬ್ಬರು ಮಕ್ಕಳೊಂದಿೆಗೆ ಸಮಯ ಕಳೆಯುತ್ತಾ ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡಿ, ಖುಷಿಯ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾನೇ ಇರ್ತಾರೆ.

ಇಂದು ಗೌರಿ ಹಬ್ಬದ ಸಂಭ್ರಮ ಸಡಗರದಲ್ಲಿರುವ ರಾಧಿಕಾ ಪಂಡಿತ್ ಅವರು ಫೋಟೋ ಒಂದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಅದು ಕರಾವಳಿಯ ಫೇಮಸ್ ತಿಂಡಿಗಳಲ್ಲಿ ಒಂದಾದ ಅರಶಿನ ಎಲೆಯ ಕಡುಬಿನ ಫೋಟೋ. ಫೋಟೋ ಶೇರ್ ಮಾಡಿ ಒಂದೆರಡು ಸಾಲುಗಳನ್ನು ಬರೆದಿದ್ದಾರೆ ರಾಧಿಕಾ. ಪತೋಲಿ. ಇದು ನನ್ನ ಅತ್ಯಂತ ಇಷ್ಟದ ತಿನಿಸು. ಗೌರಿ ಹಬ್ಬದ ಸಂದರ್ಭದಲ್ಲಿ ಇದನ್ನು ಮಾಡುತ್ತಾರೆ. ತೆಂಗಿನ ತುರಿ, ಬೆಲ್ಲದ ಮಿಶ್ರಣವನ್ನು ಅರಶಿನ ಎಲೆಯಲ್ಲಿ ಮಡಚಿಟ್ಟು ಹಬೆಯಲ್ಲಿ ಬೇಯಿಸುತ್ತಾರೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು ಎಂದು ರಾಧಿಕಾ ವಿಶ್ ಮಾಡಿದ್ದಾರೆ.

Patholi.. my favourite traditional sweet made during Gowri Habba!! Coconut and jaggery mixture steamed in turmeric leaves! Yellarigu Gowri Habbada Shubhashegalu ?

Posted by Radhika Pandit on Friday, 21 August 2020

- Advertisement -
spot_img

Latest News

error: Content is protected !!