Monday, June 8, 2026
HomeUncategorizedಕರಾವಳಿಯ ಯುವಕ, ಟಿಕ್‌ಟಾಕ್ ಸ್ಟಾರ್ ಧನರಾಜ್ ಆಚಾರ್ಯ ಬಿಗ್ ಬಾಸ್ ಮನೆಗೆ ಎಂಟ್ರಿ..!

ಕರಾವಳಿಯ ಯುವಕ, ಟಿಕ್‌ಟಾಕ್ ಸ್ಟಾರ್ ಧನರಾಜ್ ಆಚಾರ್ಯ ಬಿಗ್ ಬಾಸ್ ಮನೆಗೆ ಎಂಟ್ರಿ..!

- Advertisement -
- Advertisement -

ಬಂಟ್ವಾಳ: ಹಾಸ್ಯ ವಿಡಿಯೋಗಳ ಮೂಲಕ ಸಾಮಾಜಿಕ ಕಳಕಳಿಗೂ ಹೆಚ್ಚು ಒತ್ತು ನೀಡುವ ಕರಾವಳಿಯ ಯುವಕ, ಬಹುಮುಖ ಪ್ರತಿಭೆಯ ಕಲಾವಿದ, ಯುಟ್ಯೂಬರ್ 33 ವರ್ಷದ ಧನರಾಜ್ ಆಚಾರ್ಯ ಕಲರ್ಸ್ಬಿ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಧನರಾಜ್ ಆಚಾರ್ಯ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿದ್ದು, ಕನ್ನಡಿಗರಿಗೆ ಟಿಕ್‌ಟಾಕ್ ಸ್ಟಾರ್ ಎಂದೇ ಪರಿಚಿತರಾಗಿದ್ದರು. ಇವರು ಜರ್ನಲಿಸಂ ಪದವೀಧರನಾಗಿದ್ದು, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.

ತನ್ನ ಇಡೀ ಕುಟುಂಬದೊಂದಿಗೆ ವಿಭಿನ್ನವಾದ ವಿಡಿಯೋಗಳನ್ನು ಮಾಡುತ್ತಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಕಾರಣಕ್ಕೆ ಧನರಾಜ್ ತನ್ನ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದಾರೆ.

ಮಗುವಿನಿಂದ ಬಂದ ಅದೃಷ್ಟ…!: ಬಿಗ್ ಬಾಸ್ ಮನೆಯ ಆಫರ್ ಧನ್ ರಾಜ್ ಪತ್ನಿ ಪ್ರಜ್ಞಾ ಹೆಣ್ಣುಮಗುವಿಗೆ ಜನ್ಮ ನೀಡಿದ ಕೆಲವೇ ಸಮಯದಲ್ಲಿ ಬಂದಿದ್ದು, ಹೀಗಾಗಿ ಇದು ಮಗುವಿನಿಂದ ಬಂದ ಅದೃಷ್ಟ ಎಂದು ಮನೆಮಂದಿ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋ ಧನ್ ರಾಜ್ ಒಂದು ತಿಂಗಳ ಮಗುವನ್ನು ಬಿಗಿದಪ್ಪಿ ಮುದ್ದಿಸಿ ಟಾಟಾ ಹೇಳಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಟಿಕ್ ಟಾಕ್ ಸ್ಟಾರ್ ಬಿಗ್ ಬಾಸ್ ಮನೇನಲ್ಲಿ ಏನ್ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕಾಗಿದೆ.

- Advertisement -

Latest News

error: Content is protected !!