Friday, July 17, 2026
Homeತಾಜಾ ಸುದ್ದಿಚಾಮುಂಡೇಶ್ವರಿಗೆ ಹರಕೆ ತೀರಿಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್

ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್

- Advertisement -
- Advertisement -

ಮೈಸೂರು: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಘೋಷಣೆಗಳ ಜಾರಿ ಸಂಬಂಧ ಚಾಮುಂಡೇಶ್ವರಿಗೆ ಹರಿಸಿಕೊಂಡಿದ್ದ ಹರಕೆಯನ್ನು ಇಂದು ಕೆಪಿಸಿಸಿ ತೀರಿಸಿದೆ.‌

ಚಾಮುಂಡಿ ಬೆಟ್ಟದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ತಾಯಿ ಚಾಮುಂಡೇಶ್ವರಿಗೆ ಕೆಂಪು ಮತ್ತು ಹಸಿರು ರೇಷ್ಮೆ ಸೀರೆ ಹರಕೆ ಸಲ್ಲಿಸಿದ್ದಾರೆ.

ಅಲ್ಲದೇ ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ, ಬಾಳೆಹಣ್ಣು ದಾಳಿಂಬೆ ಸೇರಿ ಫಲ ಸಮರ್ಪಣೆ ಮಾಡಿದ ಸಿಎಂ ಮತ್ತು ಡಿಸಿಎಂ ದೇವಸ್ಥಾನದ ಗೋಪುರದ ಮುಂಭಾಗ ಈಡುಗಾಯಿ ಒಡೆದರು.

ಇದೇ ವೇಳೆ ನಾಡದೇವತೆ ಚಾಮುಂಡೇಶ್ವರಿಗೆ ಮೊದಲ ಗೃಹಲಕ್ಷ್ಮಿ ಕಾಣಿಕೆ ಸಂದಾಯ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಹರಕೆಯ ಜೊತೆಗೆ ತಲಾ 2 ಸಾವಿರ ರೂಪಾಯಿ ಕಾಣಿಕೆ ಸಮರ್ಪಿಸಿದರು.

- Advertisement -

Latest News

error: Content is protected !!