Thursday, June 4, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಓಡಾಟ:ರಾಯರ ದರ್ಶನ ಪಡೆದು ಬಸ್ ಡಿಪೋಗೆ ಭೇಟಿ ನೀಡಿದ ತಲೈವಾ

ಬೆಂಗಳೂರಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಓಡಾಟ:ರಾಯರ ದರ್ಶನ ಪಡೆದು ಬಸ್ ಡಿಪೋಗೆ ಭೇಟಿ ನೀಡಿದ ತಲೈವಾ

- Advertisement -
- Advertisement -

ಬೆಂಗಳೂರು: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ತಾವು ಚಿಕ್ಕಂದಿನಲ್ಲಿ ಬೆಳೆದ ಪರಿಸರದಲ್ಲಿ ರಜನೀಕಾಂತ್ ಓಡಾಟ ನಡೆಸಿದರು.

ಚಾಮರಾಜಪೇಟೆಯಲ್ಲಿರುವ ಸೀತಾಪತಿ ಅಗ್ರಹಾರ ರಾಘವೇಂದ್ರ ಮಠಕ್ಕೆ ಬೆಳಗ್ಗೆ ಭೇಟಿ ನೀಡಿದ ರಜನೀಕಾಂತ್ ರಾಯರ ದರ್ಶನ ಪಡೆದರು.

ಬಳಿಕ ಚಿತ್ರರಂಗ ಪ್ರವೇಶಿಸುವ ಮುನ್ನ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಜನಿಕಾಂತ್ ಜಯನಗರದಲ್ಲಿರುವ ಕೆಎಸ್ ಆರ್ ಟಿಸಿ ಬಸ್ ಡಿಪೋ 4 ಕ್ಕೆ ಭೇಟಿ ನೀಡಿದರು.ಈ ವೇಳೆ ರಜನೀಕಾಂತ್ ಭೇಟಿಯಿಂದಾಗಿ ಅಚ್ಚರಿಗೊಂಡ ಡಿಪೋ ನೌಕರರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

- Advertisement -

Latest News

error: Content is protected !!