Tuesday, October 13, 2026
Homeಕರಾವಳಿಉಡುಪಿ : ಸ್ಕೂಟರ್‌ ಮತ್ತು ಟ್ಯಾಂಕರ್‌ ಮಧ್ಯೆ ಅಪಘಾತ; ಸ್ಕೂಟರ್ ನಲ್ಲಿದ್ದ ಸಹ ಸವಾರ ಸಾವು

ಉಡುಪಿ : ಸ್ಕೂಟರ್‌ ಮತ್ತು ಟ್ಯಾಂಕರ್‌ ಮಧ್ಯೆ ಅಪಘಾತ; ಸ್ಕೂಟರ್ ನಲ್ಲಿದ್ದ ಸಹ ಸವಾರ ಸಾವು

- Advertisement -
- Advertisement -

ಉಡುಪಿ : ಸ್ಕೂಟರ್‌ ಮತ್ತು ಟ್ಯಾಂಕರ್‌ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟರ್ ನಲ್ಲಿದ್ದ ಸಹ ಸವಾರ ಸಾವನ್ನಪ್ಪಿರುವ ಘಟನೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿ ಕನ್ನಂಗಾರಿನಲ್ಲಿ ನಡೆದಿದೆ

ಜಾರ್ಖಂಡ್‌ ಮೂಲದ ಹೆಜಮಾಡಿ ಬ್ರಹ್ಮಸ್ಥಾನ ಬಳಿ ಬಾಡಿಗೆ ಮನೆಯೊಂದರ ನಿವಾಸಿ ಸದ್ದಾಂ ಅನ್ಸಾರಿ (20) ಮೃತ ಸಹ ಸವಾರ.ಈತ ಮೇಸ್ತ್ರಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.ಸ್ಕೂಟರ್‌ ಸವಾರ ಪರ್ವೇಜ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮನೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದು, ಹೆಜಮಾಡಿ ಒಳ ರಸ್ತೆಯಿಂದ ಹೆದ್ದಾರಿಗೆ ಎಂಟ್ರಿ ಕೊಡುತ್ತಿದ್ದಂತೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಗೆ ಸ್ಕೂಟರ್ ಡಿಕ್ಕಿಯಾಗಿದೆ ಎನ್ನಲಾಗಿದೆ. ಅಪಘಾತದಲ್ಲಿ  ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅನ್ಸಾರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!