Friday, June 5, 2026
Homeತಾಜಾ ಸುದ್ದಿಮಂಗಳೂರು ಕಾರ್ಯಕಾರಿಣಿ ಸಭೆ ಮುಗಿಸಿ ಹಿಂದಿರುಗುತ್ತಿದ್ದ ಸಿಎಂ ಬೆಂಗಾವಲು ವಾಹನ ಪಲ್ಟಿ

ಮಂಗಳೂರು ಕಾರ್ಯಕಾರಿಣಿ ಸಭೆ ಮುಗಿಸಿ ಹಿಂದಿರುಗುತ್ತಿದ್ದ ಸಿಎಂ ಬೆಂಗಾವಲು ವಾಹನ ಪಲ್ಟಿ

- Advertisement -
- Advertisement -

ಚಿಕ್ಕಮಗಳೂರು: ಸಿಎಂ ಬೆಂಗಾವಲು ವಾಹನ ಪಲ್ಟಿಯಾಗಿ ಸಿಬ್ಬಂದಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಜೇನುಗದ್ದೆ ಬಳಿ ನಡೆದಿದೆ. ಸಿಎಂ ಬೆಂಗಾವಲು ವಾಹನದ ಸಿಬ್ಬಂದಿ ಡ್ಯೂಟಿ ಮುಗಿಸಿ ಹಿಂದಿರುಗುವಾಗ ಅವಘಡ ಸಂಭವಿಸಿದೆ.

ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮಕ್ಕೆ ತೆರಳಿದ್ದ ಬೆಂಗಾವಲು ಪಡೆಯ ಜೀಪ್ ಡ್ಯೂಟಿ ಮುಗಿಸಿ ಹಿಂದಿರುಗುವಾಗ ಪಲ್ಟಿಯಾಗಿದೆ. ಜೀಪ್ ಬ್ರೇಕ್ ಜಾಮ್ ಆಗಿ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಜೀಪ್ ನಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಜೀಪ್ ಚಾಲಕ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Latest News

error: Content is protected !!