Monday, April 29, 2024
Homeತಾಜಾ ಸುದ್ದಿನಾಯಿಗೂ ಸಿಕ್ತು ಮೇಯರ್ ಪಟ್ಟ

ನಾಯಿಗೂ ಸಿಕ್ತು ಮೇಯರ್ ಪಟ್ಟ

spot_img
- Advertisement -
- Advertisement -

ಅಮೆರಿಕಾ: ಅಮೆರಿಕಾದ ಚುನಾವಣಾ ಫಲಿತಾಂಶಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ. ಹೀಗಿರುವಾಗಲೇ ಇಲ್ಲಿನ ಕೆಂಟುಕಿಯ ರಾಜ್ಯದ ರಾಬಿಟ್‌ಹ್ಯಾಶ್​ ಎಂಬ ಗ್ರಾಮದಲ್ಲಿ ಒಂದು ಅಚ್ಚರಿಯ ಬೆಳವಣೆಗೆ ನಡೆದಿದೆ. ಅದೇನಪ್ಪಾ ಅಂದ್ರೆ ಅಲ್ಲಿ ನಾಯಿಯೊಂದನ್ನು ಮೇಯರ್ ಆಗಿ ಆಯ್ಕೆ ಮಾಡಲಾಗಿದೆ.

6 ತಿಂಗಳ ಫ್ರೆಂಚ್‌ಬುಲ್‌ಡಾಗ್‌​ ಅನ್ನು ಮೇಯರ್‌ ಆಗಿ ಆಯ್ಕೆ ಮಾಡಲಾಗಿದೆ. ಅಚ್ಚರಿಯ ವಿಚಾರ ಎಂದರೆ, ಈ ಶ್ವಾನವು ಬರೋಬ್ಬರಿ 13,143 ಸಾವಿರ ಮತಗಳನ್ನು ಪಡೆದಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಈ ಶ್ವಾನ ಕೆಂಟಕಿಯ ಮೇಯರ್​ ಆಗಿ ಮುಂದುವರಿಯಲಿದೆ.

ಅಂದಹಾಗೆ ಇದು ಈವರೆಗಿನ ಗರಿಷ್ಠ ಮೊತ್ತದ ಮತ ಎಂದು ಪರಿಗಣಿಸಲಾಗಿದೆ. ಇನ್ನು ಈ ಚುನಾವಣೆಯಲ್ಲಿ ಬೀಗಲ್​ ಜಾತಿಯ ನಾಯಿ ಎರಡನೇ ಸ್ಥಾನ ಪಡೆದರೆ ಗೋಲ್ಡನ್​ ರಿಟ್ರೈವರ್​​ ಮೂರನೇ ಸ್ಥಾನ ಪಡೆದಿದೆ.

ಅಷ್ಟಕ್ಕೂ ನಾಯಿಯನ್ನು ಮೇಯರ್‌ ಆಗಿಸಿರುವ ಹಿಂದೆ ಅಂಥ ವಿಶೇಷತೆ ಏನೂ ಇಲ್ಲ. ನಿಜವಾಗಿಯೂ ಇಲ್ಲಿ ಮೇಯರ್‌ ಎಂಬ ಯಾವುದೇ ಹುದ್ದೆ ಇಲ್ಲ. ಬದಲಿಗೆ ಮೇಯರ್‌ ಹೆಸರಿನಲ್ಲಿ ನಾಯಿಯ ಚುನಾವಣೆ ನಡೆದಿದೆ.

ಆಯ್ಕೆಯಾಗುವ ನಾಯಿಯನ್ನು ಗ್ರಾಮದ ಸುಧಾರಣೆಗೋಸ್ಕರ ನಿಧಿ ಸಂಗ್ರಹ ಮಾಡಲು ಬಳಸಿಕೊಳ್ಳಲಾಗುತ್ತದೆ. ರ್ಯಾಬಿಟ್‌ಹ್ಯಾಷ್‌ ಹಿಸ್ಟಾರಿಕ್‌ ಸೊಸೈಟಿ ಹೆಸರಿನ ಈ ಸಂಸ್ಥೆಗೆ ಇದಾಗಲೇ ಈ ಹೊಸ ಮೇಯರ್‌ 13 ಸಾವಿರ ಡಾಲರ್‌ (ಸುಮಾರು 10 ಲಕ್ಷ ರೂಪಾಯಿ) ನಿಧಿಯನ್ನು ಸಂಗ್ರಹಿಸಿ ಕೊಟ್ಟಿದ್ದಾನೆ.

- Advertisement -
spot_img

Latest News

error: Content is protected !!