Sunday, April 28, 2024
Homeಕರಾವಳಿಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಬಣ ರಾಜಕೀಯ: ರಾಜ್ಯಾಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ನಡೆಯುವುದೇ ಭಿನ್ನಮತ ಶಮನ?

ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಬಣ ರಾಜಕೀಯ: ರಾಜ್ಯಾಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ನಡೆಯುವುದೇ ಭಿನ್ನಮತ ಶಮನ?

spot_img
- Advertisement -
- Advertisement -

ಸುಳ್ಯ: ಕಮಲ ಪಾಳಯದ ಭದ್ರ ಕೋಟೆ ಎನಿಸಿಕೊಂಡಿರುವ ಸುಳ್ಯ ಬಿಜೆಪಿಯಲ್ಲಿ ಸ್ಪಷ್ಟವಾಗಿ ಎರಡು ಬಣಗಳು ಸೃಷ್ಟಿಯಾಗಿವೆ. ಪಕ್ಷದ ಚಟುವಟಿಕೆಗಳಿಗೆ ಕರೆಯದೆ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಎಸ್‌.ಎನ್‌.ಮನ್ಮಥ, ಎನ್‌.ಎ.ರಾಮಚಂದ್ರ ಮತ್ತಿತರ ನೇತೃತ್ವದಲ್ಲಿ ಬಿಜೆಪಿಯ 25ಕ್ಕೂ ಹೆಚ್ಚು ಮಂದಿ ಹಿರಿಯ ನಾಯಕರು ಸಭೆ ನಡೆಸಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅವರಿಗೆ ದೂರು ನೀಡಿದ್ದರು. ಬಳಿಕ ಭಿನ್ನರನ್ನು ಕರೆಸಿ ಜಿಲ್ಲಾಧ್ಯಕ್ಷರು ಚರ್ಚೆ ನಡೆಸಿದ್ದರು.

ಆದರೆ ಭೇಟಿ ಫಲಪ್ರದವಾಗದ ಹಿನ್ನೆಲೆಯಲ್ಲಿ ಅತೃಪ್ತರು ಮಾಧ್ಯಮಗೋಷ್ಟಿ ನಡೆಸಿ ಅಸಮಾಧಾನವನ್ನು ತೋರ್ಪಡಿಸಲು ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸಲು ನಿರ್ಧರಿಸಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನ.7ರ ಬಳಿಕ ಅವರ ಜತೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್‌ ಶೆಟ್ಟಿ ಮೇನಾಲ ಈ ಕೂಡಲೇ ರಾಜಿನಾಮೆ ನೀಡಬೇಕು ಅಥವಾ ಅವರನ್ನು ಬದಲಾವಣೆ ಮಾಡಬೇಕು. ಎನ್‌.ಎ.ರಾಮಚಂದ್ರ, ಎಸ್‌.ಎನ್‌.ಮನ್ಮಥ ಅವರನ್ನು ಬಿಜೆಪಿ ಕೋರ್‌ ಕಮಿಟಿಗೆ ಸೇರಿಸಬೇಕು ಎಂಬುದು ಅತೃಪ್ತರ ಗುಂಪಿನ ಪ್ರಮುಖ ಬೇಡಿಕೆಯಾಗಿದೆ.

ಮಂಡಲ ಕೋರ್‌ ಕಮಿಟಿಯಲ್ಲಿ ಕೆಲವೇ ಕೆಲವು ಮಂದಿ ಇದ್ದು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಒಮ್ಮತದಿಂದ ಕೂಡಿಲ್ಲ ಹಾಗೂ ಅದೇ ನಿರ್ಧಾರಗಳನ್ನು ಎಲ್ಲರ ಮೇಲೆ ಹೇರಲಾಗುತ್ತಿದೆ. ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಪ್ರಮುಖ ನೇತಾರರನ್ನು ಮತ್ತು ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಅತೃಪ್ತರ ಗುಂಪು ಜಿಲ್ಲಾ ಪ್ರಮುಖರ ಮುಂದೆ ಇರಿಸಿದ ಪ್ರಮುಖ ಆರೋಪವಾಗಿದೆ.

ಆದರೆ ಈ ಬೇಡಿಕೆ ಹಾಗೂ ಆರೋಪಗಳಿಗೆ ಜಿಲ್ಲಾ ನೇತೃತ್ವ ಸೂಕ್ತವಾದ ಉತ್ತರ ನೀಡದ ಕಾರಣ ಚರ್ಚೆ ಮುರಿದು ಬಿದ್ದಿದೆ ಎನ್ನಲಾಗಿದೆ. ಅಲ್ಲದೆ ಬಂಡಾಯವಾಗಿ ಸ್ಪರ್ಧಿಸಿ ಗೆದ್ದ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನ ತ್ಯಜಿಸುವಂತೆ ಜಿಲ್ಲಾ ಪ್ರಮುಖರು ಮಂಡಿಸಿದ ಸಲಹೆಯನ್ನು ಅತೃಪ್ತರ ಗುಂಪು ನಿರಾಕರಿಸಿದೆ.

- Advertisement -
spot_img

Latest News

error: Content is protected !!