Sunday, May 12, 2024
Homeತಾಜಾ ಸುದ್ದಿಹೀಗೂ ಆಗುತ್ತೆ ನೋಡಿ... ಹುಡುಗಿ ಕೈಕೊಟ್ಳು ಅಂತಾ ತನ್ನನ್ನು ತಾನೇ ಮದುವೆಯಾದ ಯುವಕ..

ಹೀಗೂ ಆಗುತ್ತೆ ನೋಡಿ… ಹುಡುಗಿ ಕೈಕೊಟ್ಳು ಅಂತಾ ತನ್ನನ್ನು ತಾನೇ ಮದುವೆಯಾದ ಯುವಕ..

spot_img
- Advertisement -
- Advertisement -

ಬ್ರೆಜಿಲ್: ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹುಡುಗಿ ಕೈಕೊಟ್ಟ ಕಾರಣ ಹುಡುಗನೊಬ್ಬ ತನ್ನನ್ನು ತಾನೇ ಮದುವೆಯಾದ ಘಟನೆ ಬ್ರೆಜಿಲ್‍ನ ಇಟಾಕೆರ್ ನ ಬಾಹಿಯಾದಲ್ಲಿ ನಡೆದಿದೆ.

ಡಿಯಾಗೋ ರಾಬೆಲೊ ಹಾಗೂ ಮಿಟರ್ ಬ್ಯಾನೊ ಕಳೆದ ನವೆಂಬರ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಈ ವರ್ಷ ಅಕ್ಟೋಬರ್‍ನಲ್ಲಿ ವಿವಾಹವಾಗಲು ದಿನಾಂಕವನ್ನೂ ನಿಗದಿ ಮಾಡಲಾಗಿತ್ತು. ಆದರೆ ಇಬ್ಬರ ಮಧ್ಯೆ ವಿಪರೀತ ಜಗಳವಾಗಿದ್ದರಿಂದ ವಿವಾಹ ಮುರಿದು ಬಿದ್ದಿತ್ತು. ಆದರೆ ಹುಡುಗಿ ಬಿಟ್ಟು ಹೋದಳು. ಹಾಗಾಗಿ ಡಿಯಾಗೋ ವಿಚಲಿತನಾಗಿದ್ದ. ಆದ್ರೆ, ವಿವಾಹವನ್ನು ನಿಲ್ಲಿಸಲು ಆತನಿಗೆ ಮನಸ್ಸಿರಲಿಲ್ಲ. ಅಲ್ಲದೆ ಮಿಟರ್ ಳನ್ನು ಕರೆ ತರುವ ಪ್ರಯತ್ನವನ್ನು ಸಹ ಮಾಡಲಿಲ್ಲ. ಬದಲಿಗೆ ತನ್ನನ್ನು ತಾನೇ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಅಕ್ಟೋಬರ್ 16ರಂದು ಇಟಾಕೆರ್ ನ ಬಾಹಿಯಾದ ರೆಸಾರ್ಟ್‍ನಲ್ಲಿ ವಿವಾಹವಾಗಿದ್ದಾನೆ. ಅಲ್ಲದೆ ಈ ವಿವಾಹದಲ್ಲಿ 40ಕ್ಕೂ ಹೆಚ್ಚು ಸಂಬಂಧಿಕರು, ಸ್ನೇಹಿತರು ಆಗಮಿಸಿದ್ದರು. ಡಿಯಾಗೋ ಜೊತೆ ಅವರ ಸಂಭ್ರಮಿಸಿದ್ದಾನೆ.

ಇನ್ನು ತನ್ನ ವಿವಾಹದ ಬಗ್ಗೆ ಮಾತನಾಡಿರುವ ಆತ ವಿವಾಹದ ಮೇಲೆ ನನ್ನ ಸಂತೋಷ ಅವಲಂಬಿತವಾಗಿಲ್ಲ. ಇತರರಂತೆ ನಾನೂ ಯಾವುದೇ ಹುಡುಗಿಯನ್ನು ವಿವಾಹವಾಗಿ, ಮಕ್ಕಳನ್ನೂ ಮಾಡಬಹುದಿತ್ತು ಆದರೆ ನನ್ನ ಸಂತೋಷ ಅದರ ಮೇಲೆ ಅವಲಂಬಿತವಾಗಿಲ್ಲ. ನಾನು ಈ ರೀತಿ ವಿವಾಹವಾಗಿ ಇತರರಿಗೆ ಸಂದೇಶ ರವಾನಿಸುತ್ತಿದ್ದೇನೆ. ನಾನೊಬ್ಬ ಸಂತ್ರಸ್ತನಾಗಿ ಈ ವಿವಾಹವಾಗಿಲ್ಲ. ವಿವಾಹವಾದರೆ ಮಾತ್ರ ಸಂತೋಷವಾಗಿರುತ್ತೇವೆ ಎಂದು ನಾನು ನಂಬಿಲ್ಲ. ನಾನು ಬೇರೆ ಯಾವ ಹುಡುಗಿಯನ್ನು ಬೇಕಾದರೂ ವಿವಾಹವಾಗಬಹುದಿತ್ತು. ಮಕ್ಕಳನ್ನು ಮಾಡಬಹುದಿತ್ತು. ಆದರೆ ನನ್ನ ಸಂತೋಷ ಅದರ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳಿದ್ದಾನೆ. ಈ ಮೂಲಕ ತನ್ನ ಸೋಲೋ ವಿವಾಹವನ್ನು ಆತ  ಸಮರ್ಥಿಸಿಕೊಂಡಿದ್ದಾನೆ.

- Advertisement -
spot_img

Latest News

error: Content is protected !!