Thursday, June 4, 2026
Homeತಾಜಾ ಸುದ್ದಿತಂದೆ-ತಾಯಿ ಜೊತೆ ಮಲಗಿದ್ದ 11 ತಿಂಗಳ ಮಗುವನ್ನು ಕಳ್ಳತನ ಮಾಡಿದ ಪಾಪಿಗಳು

ತಂದೆ-ತಾಯಿ ಜೊತೆ ಮಲಗಿದ್ದ 11 ತಿಂಗಳ ಮಗುವನ್ನು ಕಳ್ಳತನ ಮಾಡಿದ ಪಾಪಿಗಳು

- Advertisement -
- Advertisement -

ಚಿಕ್ಕಮಗಳೂರು: ತಂದೆ ತಾಯಿ ಜೊತೆ ಮಲಗಿದ್ದ 11 ತಿಂಗಳ ಹೆಣ್ಣು ಮಗುವನ್ನು ಪಾಪಿಗಳು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ

ಶ್ವೇತಾ ಮತ್ತು ಶ್ರೀನಿವಾಸ್ ಎಂಬ ದಂಪತಿಗಳ 11 ತಿಂಗಳ ಹೆಣ್ಣು ಮಗು ಅನಿಶಾಳನ್ನು ಕಳ್ಳತನ ಮಾಡಿದ್ದಾರೆ. ರಾತ್ರಿ ಮನೆಗೆ ನುಗ್ಗಿದ ಕಳ್ಳರು ತಂದೆ-ತಾಯಿಯ ಜೊತೆ ಮಲಗಿದ್ದ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದಾರೆ. 2 ವರ್ಷದ ಹಿಂದೆ ಶ್ವೇತಾ ಮತ್ತು ಶ್ರೀನಿವಾಸ್ ವಿವಾಹವಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಗೆ ಒಬ್ಬಳೇ ಮಗಳಿದ್ದು, ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಅಲ್ಲದೇ ಶ್ವೇತಾ ಮತ್ತು ಶ್ರೀನಿವಾಸ್ ದಂಪತಿ ಇತ್ತೀಚೆಗೆ ಹೊಸಮನೆಯೊಂದನ್ನು ಕಟ್ಟಿಸಿದ್ದು, ಆ ಮನೆಯ ಬಾಗಿಲು ಸರಿಯಾಗಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರಾತ್ರಿ ವೇಳೆ ಮನೆಗೆ ನುಗ್ಗಿ ಮಗುವನ್ನು ಕಳ್ಳತನ ಮಾಡಿದ್ದಾರೆ.

ಇನ್ನು ಈ ಬಡಾವಣೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ನಾಲ್ವರು ಹೆಂಗಸರು ಬರುತ್ತಿದ್ದರು. ಮಗು ಕಾಣೆಯಾದ ಬಳಿಕ ಮಹಿಳೆಯರು ಸಹ ನಾಪತ್ತೆಯಾಗಿದ್ದಾರೆ. ಆದ್ದರಿಂದ ಅವರೇ ಕದ್ದಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!