Saturday, June 6, 2026
Homeಇತರಚಿಕ್ಕಮಗಳೂರು: ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಹಸುಗಳ ಹತ್ಯೆ

ಚಿಕ್ಕಮಗಳೂರು: ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಹಸುಗಳ ಹತ್ಯೆ

- Advertisement -
- Advertisement -

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಕೇರಳದಲ್ಲಿ ಅನಾನಸ್ ನಲ್ಲಿ ಸ್ಫೋಟಕ ಇಟ್ಟು ಗರ್ಭಿಣಿ ಆನೆಯೊಂದನ್ನು ಕೊಂದ ದುರಂತದ ನಡುವೆಯೇ ರಾಜ್ಯದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ದನಗಳನ್ನು ಕೊಂದಿರುವ ಅಮಾನೀಯ ಘಟನೆ ವರದಿಯಾಗಿದೆ.

ಹಲಸಿನ ಹಣ್ಣಿಗೆ ವಿಷ ಬೇರೆಸಿ ಮೂರು ದನಗಳನ್ನು ಕೊಂದಿರುವ ಪ್ರಕರಣ ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ನಡೆದಿದೆ. ಕಿಟ್ಟೆಗೌಡ ಹಾಗೂ ಮಧು ಎಂಬುವವರಿಗೆ ಸೇರಿರುವ ದನಗಳು ನೆರೆಯವರ ತೋಟಕ್ಕೆ ಬೇಕಾಬಿಟ್ಟಿ ನುಗ್ಗುತ್ತಿವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಹಲಸಿನ ಹಣ್ಣಿಗೆ ವಿಷ ಬೇರೆಸಿದ್ದಾರೆ ಎಂದು ಪೋಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!