Saturday, June 6, 2026
Homeತಾಜಾ ಸುದ್ದಿತಡವಾದ ಫ್ಲೈಟ್ ಟೇಕಾಫ್ : ಪ್ರಧಾನಿ ಜೊತೆಗಿನ ಸಿಎಂ ವೀಡಿಯೋ ಕಾನ್ಫರೆನ್ಸ್ ಮಂಗಳೂರಿನಿಂದ ಬೆಂಗಳೂರಿಗೆ...

ತಡವಾದ ಫ್ಲೈಟ್ ಟೇಕಾಫ್ : ಪ್ರಧಾನಿ ಜೊತೆಗಿನ ಸಿಎಂ ವೀಡಿಯೋ ಕಾನ್ಫರೆನ್ಸ್ ಮಂಗಳೂರಿನಿಂದ ಬೆಂಗಳೂರಿಗೆ ಶಿಫ್ಟ್

- Advertisement -
- Advertisement -

ಬೆಂಗಳೂರು: ದೇಶದಲ್ಲಿ ಕೋವಿಡ್ ನಾಲ್ಕನೇ ಅಲೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಂಗಳೂರಿನಿಂದ ಸಿಎಂ ಬಸವರಾಜ ಬೊಮ್ಮಾಯಿ ನಡೆಸಬೇಕಿದ್ದ ವೀಡಿಯೋ ಕಾನ್ಫರೆನ್ಸ್ ಬೆಂಗಳೂರಿಗೆ ಶಿಫ್ಟ್ ಆಗಿದೆ.

ಸಿಎಂ ಮಂಗಳೂರಿಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆಗಲು ಸುಮಾರು 20 ನಿಮಿಷ ತಡವಾದ ಕಾರಣ ಸಿಎಂ ಕೆಂಪೇಗೌಡ ಏರ್ ಪೋರ್ಟ್ ನಿಂದ ಗೃಹ ಕಚೇರಿ ಕೃಷ್ಣಾಗೆ ವಾಪಸಾಗಿದ್ದಾರೆ.

ಪ್ರಧಾನಿ ಮೋದಿ ಜೊತೆಗಿನ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ಭಾಗಿಯಾಗಲು ತಡವಾಗುತ್ತದೆ ಎಂದು ಸಿಎಂ ವಿಮಾನದಲ್ಲಿ ಕುಳಿತು ಬಳಿಕ ವಾಪಸ್ ಆಗಿದ್ದಾರೆ. ‌

ಗೃಹ ಕಚೇರಿ ಕೃಷ್ಣಾದಿಂದಲೇ ಸಿಎಂ ಭಾಗಿಯಾಗಲಿದ್ದು, ವೀಡಿಯೋ ಕಾನ್ಫೆರೆನ್ಸ್ ಮುಗಿಸಿ ಸಾಧ್ಯವಾದರೇ ಮತ್ತೆ ವಿಶೇಷ ವಿಮಾನದಲ್ಲಿ ಮತ್ತೆ ಮಂಗಳೂರಿಗೆ ಆಗಮಿಸಲಿದ್ದಾರೆ.

- Advertisement -

Latest News

error: Content is protected !!