Friday, June 5, 2026
Homeಕರಾವಳಿಉಡುಪಿಕುಂದಾಪುರ: ಮಾಸ್ಕ್ ಧಾರಣೆ  ಹಾಗೂ ಸುರಕ್ಷಿತ ಅಂತರ ಪಾಲನೆ ಕಡ್ಡಾಯ: ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ...

ಕುಂದಾಪುರ: ಮಾಸ್ಕ್ ಧಾರಣೆ  ಹಾಗೂ ಸುರಕ್ಷಿತ ಅಂತರ ಪಾಲನೆ ಕಡ್ಡಾಯ: ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ -ಉಡುಪಿ ಡಿ.ಸಿ

- Advertisement -
- Advertisement -

ಕುಂದಾಪುರ : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ ಮಾಡಬೇಕೆಂದು ಸರ್ಕಾರ ನಿನ್ನೆ ಹೊಸ ನಿರ್ದೇಶನ ನೀಡಿದ್ದು ಅದರಂತೆ ಎಲ್ಲರೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸ ನಿರ್ದೇಶನದ ಹಿನ್ನೆಲೆ ಸ್ಥಳೀಯಾಡಳಿತ ತಂಡದ ಜೊತೆಗೆ ಈ ಆದೇಶ ಪಾಲನೆಯಲ್ಲಿ ತೊಡಗಿಸಿಕೊಳ್ಳಲಿದೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಇದನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಉತ್ತಮವಾಗಿ ನಡೆದಿದೆ. ಮೊದಲನೇ  ಡೋಸ್ ಪಡೆದವರು ನೂರಕ್ಕೆ ನೂರು ಪ್ರತಿಶತವಾಗಿದ್ದು, ಶೇ. 98.5 ಜನರು ಎರಡನೇ ಡೋಸ್ ಪಡೆದಿದ್ದಾರೆ. ಉಳಿದವರು ಕೂಡ ಲಸಿಕೆ ಪಡೆಯಬೇಕು ಹಾಗೂ ಅರ್ಹರು ಮುನ್ನೆಚ್ಚರಿಕಾ ಡೋಸ್ ಕೂಡ ಪಡೆಯಲು ಪ್ರಚಾರ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

- Advertisement -

Latest News

error: Content is protected !!