Monday, June 8, 2026
Homeಕರಾವಳಿಉಡುಪಿನರೇಂದ್ರ ಮೋದಿ ಸರ್ಕಾರಕ್ಕೆ 8 ವರ್ಷ ಹಿನ್ನೆಲೆ : ಮಣಿಪಾಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

ನರೇಂದ್ರ ಮೋದಿ ಸರ್ಕಾರಕ್ಕೆ 8 ವರ್ಷ ಹಿನ್ನೆಲೆ : ಮಣಿಪಾಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

- Advertisement -
- Advertisement -

ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಂಟು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಣಿಪಾಲದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ನಮ್ಮ ನೆಚ್ಚಿನ ನಾಯಕರ ಸರಕಾರಕ್ಕೆ 8 ವರ್ಷ ಪೂರ್ಣ ಆಗಿದೆ, ಎಂಟು ವರ್ಷದ ಸಂಭ್ರಮ ಬಹಳ ಮುಖ್ಯ
ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆತ್ಮಾವಲೋಕನ ಮತ್ತು ಸಿಂಹಾವಲೋಕನ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಮುಂದಿನ 25 ವರ್ಷದ ಸಂಕಲ್ಪ ಬಹಳ ಮುಖ್ಯ ಎಂದು ಹೇಳಿರುವ ಸಿಎಂ, ಮೋದಿ ಅಧಿಕಾರಾವಧಿಯ ಅಭಿವೃದ್ಧಿ ಚರ್ಚೆ ಆಗಬೇಕಿದೆ,
ದೇಶದ ಭವಿಷ್ಯದ ಸುರಕ್ಷತೆ, ದೇಶದ ಸಮೃದ್ಧಿಗೆ ಮೋದಿ ಅವಶ್ಯಕ,
ಸಾಧನೆ ಮಾಡಿದವರು ಮಾತ್ರ ರಿಪೋರ್ಟ್ ಕಾರ್ಡ್ ಕೊಡಲು ಸಾಧ್ಯ ಇದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರ ಯೋಜನೆ ಭಾರತ ಘೋಷಣೆಯಾಯ್ತು, ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಸಿಎಂ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಸ್. ಅಂಗಾರ ಉಪಸ್ಥಿತರಿದ್ದರು.

- Advertisement -

Latest News

error: Content is protected !!