Thursday, September 10, 2026
Homeತಾಜಾ ಸುದ್ದಿರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚನೆ ಆರೋಪ: ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಸೇರಿ ನಾಲ್ವರ ಬಂಧನ

ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚನೆ ಆರೋಪ: ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಸೇರಿ ನಾಲ್ವರ ಬಂಧನ

- Advertisement -
- Advertisement -

ಬೆಂಗಳೂರು : ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸಿದ ಆರೋಪದಡಿ ಸಿನಿಮಾ ನಿರ್ಮಾಪಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೋಮಲ್ ನಟನೆಯ ಲೊಡ್ಡೆ ಸಿನಿಮಾ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ, ಚಂದ್ರಶೇಖರ್ ಬಂಧಿತರು.

ಕೋಮಲ್ ನಟನೆಯ ಲೊಡ್ಡೆ ಸಿನಿಮಾ ನಿರ್ಮಿಸಿದ್ದ ಮಂಜುನಾಥ್ ಸಿನಿಮಾಗೆ ಕೋಟ್ಯಾಂತರ ರೂ. ಬಂಡವಾಳ ಹೂಡಿದ್ದರು. ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣದೇ ಮಂಜುನಾಥ್ ನಿಗೆ ನಷ್ಟವಾಗಿತ್ತು. ಬಳಿಕ ರಾಜಾಜಿನಗರದಲ್ಲಿ ರಿಯಲ್ ಎಸ್ಟೇಟ್ ಕಚೇರಿಯನ್ನು ತೆರೆದಿದ್ದರು. ಬಳಿಕ ಕಡಿಮೆ ಬೆಲೆ ನಿವೇಶನ ಕೊಡಿಸುವುದಾಗಿ ಪುಷ್ಪಕುಮಾರ್ ಎಂಬುವರಿಗೆ ವಂಚಿಸಿದ್ದರು. ಹೀಗಾಗಿ ಪುಷ್ಪಕುಮಾರ್ ಪೊಲೀಸ್ ಠಾಣೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!