Saturday, June 6, 2026
Homeಕರಾವಳಿಕಾರ್ಕಳ: ಗ್ರಾಹಕರ ಸೋಗಿನಲ್ಲಿ ಹಾರ್ಡ್ ವೇರ್ ಅಂಗಡಿಗೆ ಬಂದು, ಹಣ ಕಳ್ಳತನ

ಕಾರ್ಕಳ: ಗ್ರಾಹಕರ ಸೋಗಿನಲ್ಲಿ ಹಾರ್ಡ್ ವೇರ್ ಅಂಗಡಿಗೆ ಬಂದು, ಹಣ ಕಳ್ಳತನ

- Advertisement -
- Advertisement -

ಕಾರ್ಕಳ: ಇಲ್ಲಿನ ಡಾ.ಟಿಎಂಎ ಪೈ ಆಸ್ಪತ್ರೆ ಎದುರಿನ ಮಂಜುಶ್ರೀ ಕಟ್ಟಡದಲ್ಲಿನ ಹಾರ್ಡ್‌ವೇರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರಿಬ್ಬರು, ಡ್ರಾವರ್ ಒಡೆದು ಲಕ್ಷಾಂತರ ರೂ. ನಗದು ಕಳವು ಮಾಡಿರುವ ಘಟನೆ ನಡೆದಿದೆ.

ಕಾರ್ಕಳ ಮಠದಬೆಟ್ಟುವಿನ ದೀಪಕ್ ಭಟ್ ಎಂಬವರ ಧ್ವನಿ ಎಂಟರ್ ಪ್ರೈಸಸ್ ಹಾರ್ಡ್‌ವೇರ್ ಅಂಗಡಿಗೆ ಇಬ್ಬರು ವ್ಯಕ್ತಿಗಳು ಬಂದು 4 ಚೀಲ ಸಿಮೆಂಟ್ ಅಂಗಡಿಯ ಪಕ್ಕದಲ್ಲಿರುವ ಮನೆಗೆ ಹಾಕುವಂತೆ ತಿಳಿಸಿದರು. ಆಗ ಅಂಗಡಿ ಯಲ್ಲಿದ್ದ ಕೆಲಸಗಾರ ಅಶೋಕ್ ಸಿಮೆಂಟ್ ಚೀಲವನ್ನು ಆ ಮನೆಗೆ ತೆಗೆದು ಕೊಂಡು ಹೋಗಿ ಬಂದು ನೋಡಿದಾಗ ಇಬ್ಬರು ವ್ಯಕ್ತಿಗಳು ಇರಲಿಲ್ಲ.

ಬಳಿಕ ಪರಿಶೀಲಿಸಿದಾಗ ಅವರು ಮೇಜಿನ ಡ್ರಾವರನ್ನು ಒಡೆದು 1 ಲಕ್ಷ 45 ಸಾವಿರ ರೂ.ವನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!