
ಕೇರಳ: ಇಲ್ಲಿನ ವಲಂಚೇರಿ ಸಮೀಪದ ಚೊಟ್ಟೂರಿನ ಶಿಹಾಬ್ ಎಂಬ ಯುವಕ ಕಾಲ್ನಡಿಗೆಯಲ್ಲೇ ಹಜ್ ಯಾತ್ರೆಗೆ ಹೊರಟಿದ್ದಾರೆ. ಮಕ್ಕಾಗೆ ಕೇರಳದ ಅವರ ಮನೆಯಿಂದ ಸುಮಾರು 8,640 ಕಿಮೀ ದೂರವಿದ್ದು, ಆರಂಭದಲ್ಲಿ ಶಿಹಾಬ್ ತನ್ನ ಆಸೆಯನ್ನು ಹೇಳಿದಾಗ ಅವರ ಮಾತು ಕೇಳಿದ ಅನೇಕರು ಇದೆಲ್ಲಾ ಆಗೋ ಮಾತಾ ಎಂದರಂತೆ.
ಅವರ ತಾಯಿ ಮತ್ತು ಪತ್ನಿ ಕೂಡ ಶಿಹಾಬ್‌ನ ಆಸೆಯನ್ನು ವಿಚಿತ್ರವಾಗಿ ಕಂಡರಂತೆ. ಆದರೆ ನಂತರ ಅವರು ಶಿಹಾಬ್ ಗೆ ಬೆಂಬಲಿಸಿದ್ದಾರೆ. 29 ವರ್ಷದ ಶಿಹಾಬ್ ನಡಿಗೆಗೆ ತನ್ನನ್ನು ತಾನು ಸಿದ್ಧಪಡಿಸಿಕೊಂಡಿದ್ದಾರೆ. 2023 ರಲ್ಲಿ ಹಜ್ ಯಾತ್ರೆಯನ್ನು ಪೂರ್ಣಗೊಳಿಸುವುದು ಅವರ ಉದ್ದೇಶವಾಗಿದೆ.
ಶಿಹಾಬ್ 7 ಕಿ.ಮೀ ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸಲು ಪ್ಲ್ಯಾನ್ ಹಾಕಿದ್ದಾರೆ. ಅವರು 280 ದಿನಗಳು ಅಥವಾ 8 ತಿಂಗಳುಗಳಲ್ಲಿ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಬಹುದು ಎಂದು ಅಂದಾಜಿಸಿದ್ದಾರೆ. ಶಿಹಾಬ್ ಅವರು ವಾಹ್ಗಾ ವಲಯ (ಪಂಜಾಬ್-ಲಾಹೋರ್ ಗಡಿ) ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿ ಅಲ್ಲಿಂದ ಇರಾನ್-ಇರಾಕ್-ಕುವೈತ್‌ಗೆ ಹೋಗಿ ಸೌದಿ ಅರೇಬಿಯಾ ತಲುಪಲಿದ್ದಾರೆ.


