Monday, June 24, 2024
Homeಕರಾವಳಿಚೈತ್ರ ಕುಂದಾಪುರ ಬಜರಂಗದಳ ಕಾರ್ಯಕರ್ತೆ ಅಲ್ಲ:ಮಂಗಳೂರಿನಲ್ಲಿ ಶರಣ್ ಪಂಪ್ ವೆಲ್ ಸ್ಪಷ್ಟೀಕರಣ

ಚೈತ್ರ ಕುಂದಾಪುರ ಬಜರಂಗದಳ ಕಾರ್ಯಕರ್ತೆ ಅಲ್ಲ:ಮಂಗಳೂರಿನಲ್ಲಿ ಶರಣ್ ಪಂಪ್ ವೆಲ್ ಸ್ಪಷ್ಟೀಕರಣ

spot_img
- Advertisement -
- Advertisement -

ಮಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಚೈತ್ರ ಕುಂದಾಪುರ ಬಜರಂಗದಳ ಕಾರ್ಯಕರ್ತೆ ಅಲ್ಲ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿರುವ ಶರಣ್ ಪಂಪ್ ವೆಲ್, ಚೈತ್ರ ಕುಂದಾಪುರ ಆರೋಪಿಯಾಗಿರುವ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ವಾಗ್ಮಿ ಎಂಬ ಕಾರಣಕ್ಕೆ ಭಾಷಣಕ್ಕೆ ಕರೆಸಿಕೊಳ್ಳುತ್ತಿದ್ದೆವು ಎಂಬುದು ಹೊರತುಪಡಿಸಿದರೆ ಚೈತ್ರ ಕುಂದಾಪುರ ನಮ್ಮ ಸಂಘಟನೆಯವರಲ್ಲ ಎಂದು ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಅಲ್ಲದೇ, ಈ ಪ್ರಕರಣ ನನ್ನ ಗಮನಕ್ಕೆ ಎರಡು ತಿಂಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿದ್ದು, ವಜ್ರದೇಹಿ ಮಠದ ಸ್ವಾಮೀಜಿ ನನ್ನೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದರು ಎಂದೂ ಸುದ್ದಿಗೋಷ್ಠಿಯಲ್ಲಿ ಶರಣ್ ಪಂಪ್ ವೆಲ್ ಹೇಳಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!