Monday, April 29, 2024
Homeಅಪರಾಧಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ; ಐದು ಲಕ್ಷ್ಮ ವಂಚನೆ ಪ್ರಕರಣ

ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ; ಐದು ಲಕ್ಷ್ಮ ವಂಚನೆ ಪ್ರಕರಣ

spot_img
- Advertisement -
- Advertisement -

ಬ್ರಹ್ಮಾವರ: ಬಿಜೆಪಿ ಟಿಕೆಟ್ ಪ್ರಕರಣದಲ್ಲಿ ಬಹುಕೋಟಿ ವಂಚಿಸಿ ಜೈಲು ಪಾಲಾಗಿರುವ ಚೈತ್ರಾ, ಈಗ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ.

ವ್ಯಕ್ತಿಯೋರ್ವನಿಗೆ ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ಐದು ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರು ಬಾಡಿ ವಾರೆಂಟ್ ಮುಖೇನ ವಿಚಾರಣೆಗೆ ಕರೆತಂದಿದ್ದಾರೆ. ಪ್ರಕರಣದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ಸುಧೀನ್ ಪೂಜಾರಿ ಎಂಬವರು ದೂರು ದಾಖಲಿಸಿದ್ದರು ಎನ್ನಲಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚೈತ್ರಾಳನ್ನು ಪೊಲೀಸ್ ಕಸ್ಟಡಿಗೆ ಪಡೆದ ಕೋಟ ಪೊಲೀಸರು, ಮಂಗಳವಾರದಂದು ಬೆಂಗಳೂರಿನಿಂದ ಬ್ರಹ್ಮಾವರಕ್ಕೆ ಕರೆತಂದಿದ್ದರು.

ಈ ಕಾರ್ಯಾಚರಣೆಯನ್ನು ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ, ಕೋಟ ಪಿಎಸ್ ಐ ಶಂಭುಲಿಂಗಯ್ಯ ಮತ್ತವರ ತಂಡ ಸುಧೀನ ಅವರು ನೀಡಿದ ದೂರಿನ ಕುರಿತಂತೆ ಚೈತ್ರಾಳನ್ನು ದಿನವಿಡೀ ವಿಚಾರಣೆ ನಡೆಸಿತು. ವಿಚಾರಣೆ ಪೂರ್ಣಗೊಂಡ ಬಳಿಕ ಕೋಟ ಪಿಎಸ್‌ಐ ಶಂಭುಲಿಂಗಯ್ಯ ಅವರು ಚೈತ್ರಾಳನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿಪೀಠ ಬ್ರಹ್ಮಾವರ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಹಾಜರುಪಡಿಸಿದರು.

ನ್ಯಾಯಾಲಯದ ಕಾನೂನು ಪುಕ್ರಿಯೆಗಳನ್ನು ಮುಗಿಸಿದ ಬಳಿಕ ‘ಚೈತ್ರಾಳನ್ನು ಮಂಗಳೂರಿನ ಜೈಲಿಗೆ ಕಳುಹಿಸಿಕೊಡಲಾಗಿದ್ದು, ಅಲ್ಲಿಂದ ಇಂದು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.

- Advertisement -
spot_img

Latest News

error: Content is protected !!