Tuesday, May 7, 2024
Homeಕರಾವಳಿಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬೆಳ್ತಂಗಡಿಯ ಯುವ ಆಟಗಾರ ಅಶ್ವಲ್ ರೈ ಭಾಜನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬೆಳ್ತಂಗಡಿಯ ಯುವ ಆಟಗಾರ ಅಶ್ವಲ್ ರೈ ಭಾಜನ

spot_img
- Advertisement -
- Advertisement -

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ 2023ನೇ ಸಾಲಿನ ‘ಜಿಲ್ಲಾ ರಾಜ್ಯೋತ್ಸವ’ ಕ್ರೀಡಾ ಕ್ಷೇತ್ರದಲ್ಲಿ ವಾಲಿಬಾಲ್ ಕ್ರೀಡಾಪಟು ಅಶ್ವಲ್ ರೈ ಬೆಳ್ತಂಗಡಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೀರ್ತಿ ಸಂದಿದೆ.

ಭಾರತ ತಂಡವನ್ನು ಪ್ರತಿನಿಧಿಸುವ ನಂಬರ್ ವನ್ ಪ್ಲೇಯರ್ ಆಗಿ ಯುವ ಆಟಗಾರ ಅಶ್ವಲ್ ರೈ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 2021 ಸೆಪ್ಟೆಂಬರ್‌ನಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಏಷಿಯನ್ ಗೇಮ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಪುರುಷರ ವಿಭಾಗದ ವಾಲಿಬಾಲ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದರು. 2023 ಸಪ್ಟೆಂಬರ್ ನಲ್ಲಿ ಚೀನಾದಲ್ಲಿ ನಡೆದ ಎಷ್ಯಾನ್ ಗೇಮ್ಸ್ ನಲ್ಲಿ ಭಾರತದ ಪುರಷರ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿ ಭಾರತದ ಕೀರ್ತಿಯನ್ನು ಹಬ್ಬಿಸಿದ್ದಾರೆ.

ಮೂಲತಃ ಬೆಳ್ತಂಗಡಿಯವರಾದ ಅಶ್ವಲ್ ರೈ ಏಷ್ಯಾದ ಬೆಸ್ಟ್ ಬ್ಲಾಕರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ತಂದೆ ಸಂಜೀವ ರೈ ಮತ್ತು ತಾಯಿ ವಾಣಿ ಎಸ್ ರೈ ಇವರ ಮಗ. ಸದ್ಯ ಸೌತ್ ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ ವೃತ್ತಿ ಸಲ್ಲಿಸುತ್ತಿದ್ದಾರೆ.

ಅಶ್ವಲ್ ರೈ ಅವರ ಸಾಧನೆಗಳು: IPL ಮಾದರಿಯಲ್ಲಿ ನಡೆಯುವ ಜನಪ್ರಿಯ ವಾಲಿಬಾಲ್ ಲೀಗ್ ಪ್ರೈಮ್ ವಾಲಿಬಾಲ್ ಲೀಗ್ ಪಂದ್ಯದಲ್ಲಿ ಕೊಲ್ಕತ್ತ ತಂಡ‌ ಬೋಲ್ಟ್ ತಂಡದ ನಾಯಕನಾಗಿ ಒಂದು ಬಾರಿ ಚಾಂಪಿಯನ್, 2022 ರನ್ನರ್ ಅಫ್ ಪ್ರಶಸ್ತಿ ಪಡೆಯಲು ಅಶ್ವಲ್ ಅವರ ಮೈಂಡ್ ಗೇಮ್ ಆಟವೇ ಪ್ರಮುಖವಾಗಿತ್ತು. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು 2020 – 2021 ಸಾಲಿನ ಏಕಲವ್ಯ ಪ್ರಶಸ್ತಿಯನ್ನೂ ನೀಡಿ ಗೌರವಿಸಿತು.

- Advertisement -
spot_img

Latest News

error: Content is protected !!