ಬೆಂಗಳೂರು; 5ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಒಡಿಶಾದಲ್ಲಿ ಬಂಧನಕ್ಕೀಡಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.
ಅಭಿನವ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಒಡಿಶಾದ ಕಟಕ್ ನಲ್ಲಿ ಬಂಧಿಸಿದ್ದರು. ಬಂಧನದ ಬಳಿಕ, ಇದೀಗ ಅವರನ್ನು ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದಾರೆ.
ಇದೀಗ ಅಭಿನವ ಹಾಲಶ್ರೀ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದು, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆಯೋ ಸಾಧ್ಯತೆ ಇದೆ.
ಅಂದಹಾಗೇ ಕಳೆದ 11 ದಿನಗಳಿಂದ ಅಭಿವನ ಹಾಲಶ್ರೀ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದರು. ಅವರನ್ನು ಪತ್ತೆಗಾಗಿ ಉದ್ಯಮಿಗೆ ವಂಚನೆ ಕೇಸ್ ತನಿಖೆ ನಡೆಸುತ್ತಿರುವಂತ ಸಿಸಿಬಿ ಪೊಲೀಸರು ಅವರ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೇ ಅಭಿನವ ಹಾಲಶ್ರೀ ಬಳಸುತ್ತಿದ್ದಂತ ಕಾರನ್ನು ಜಪ್ತಿ ಮಾಡಿ, ಕೊನೆಯ ಬಾರಿಗೆ ಅಭಿವನ ಹಾಲಶ್ರೀ ಕಾರಿನಲ್ಲಿ ಎಲ್ಲಿಗೆ ಪಯಣಿಸಿದ್ದು ಎಂಬ ಮಾಹಿತಿಯನ್ನು ಕಲೆ ಹಾಕಿ ಒಡಿಶಾದಲ್ಲಿ ಬಂಧಿಸಿದ್ದರು,