Thursday, June 25, 2026
Homeತಾಜಾ ಸುದ್ದಿಖ್ಯಾತ ನಟ ವಿಜಯ್ ಆಂಟನಿ ಪುತ್ರಿ ನೇಣಿಗೆ ಶರಣು

ಖ್ಯಾತ ನಟ ವಿಜಯ್ ಆಂಟನಿ ಪುತ್ರಿ ನೇಣಿಗೆ ಶರಣು

- Advertisement -
- Advertisement -

ಚೆನ್ನೈ: ತಮಿಳಿನ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ಪುತ್ರಿ ಮೀರಾ ಇಂದು ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪಿಯುಸಿ ಓದುತ್ತಿದ್ದ ಮೀರಾ ಮಂಗಳವಾರ ಮುಂಜಾನೆ ಚೆನ್ನೈನ ತೆನಾಂಪೇಟೆಯಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.  ಮನೆ ಮಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೀರಾ ಕೊನೆಯುಸಿರೆಳೆದಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಮೀರಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು , ಅದಕ್ಕಾಗಿಯೇ ಚಿಕಿತ್ಸೆಯನ್ನೂ ಪಡೆಯುತ್ತಿದ್ದಳು ಎನ್ನಲಾಗಿದೆ.

ವಿಜಯ್ ಆಂಟನಿ ಜನಪ್ರಿಯ ಸಂಗಿತ ಸಂಯೋಜಕರಾಗಿದ್ದು, ಪ್ರಧಾನವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಸಂಗೀತ ಸಂಯೋಜಕರಾಗಿದ್ದ ಅವರು ನಿರ್ಮಾಪಕ, ನಟ, ಗೀತರಚನೆಕಾರ, ಆಡಿಯೊ ಎಂಜಿನಿಯರ್ ಮತ್ತು ನಿರ್ದೇಶಕರೂ ಆಗಿ ಹೆಸರು ಗಳಿಸಿದ್ದಾರೆ.

- Advertisement -

Latest News

error: Content is protected !!