Monday, April 29, 2024
Homeಕರಾವಳಿಸುಳ್ಯ; ಶಿಲಾಯುಗದ ಅಪರೂಪದ ಗುಹೆ ಪತ್ತೆ

ಸುಳ್ಯ; ಶಿಲಾಯುಗದ ಅಪರೂಪದ ಗುಹೆ ಪತ್ತೆ

spot_img
- Advertisement -
- Advertisement -

ಸುಳ್ಯ; ಇಲ್ಲನ ಕಲ್ಮಕಾರು ಎಂಬಲ್ಲಿ ಶಿಲಾಯುಗದ ಅಪರೂಪದ ಗುಹೆ ಪತ್ತೆಯಾಗಿದೆ. ಕಲ್ಮಕಾರು ಗ್ರಾಮದ ಬಿಳಿಮಲೆ ಉಮೇಶ್ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಜೆಸಿಬಿ ಮೂಲಕ ಅಗೆಯುತ್ತಿದ್ದಾಗ ಗುಹೆ ಪತ್ತೆಯಾಗಿದೆ.

ರಬ್ಬರ್ ತೋಟದಲ್ಲಿ  ಮುಳ್ಳುಗಳಿಂದ ಕೂಡಿದ್ದ ಜಾಗದಲ್ಲಿ ಅಗೆಯುತ್ತಿದ್ದಾಗ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದ ವೇಳೆ ಸುರಂಗ ಪತ್ತೆಯಾಗಿದೆ.  ಒಳಭಾಗ ದೊಡ್ಡ ಗಾತ್ರದ ಸ್ನಾನದ ಹಂಡೆ ಮಾದರಿಯಲ್ಲಿದೆ. ಇದು ಸುಮಾರು 6 ಫೀಟ್ ಆಳವಿದೆ. ಕೆತ್ತನೆ ಮೂಲಕ ನಿರ್ಮಿಸಿರುವುದು ಕಂಡುಬಂದಿದೆ.

 ಹಿಂದಿನ ಶಿಲಾಯುಗದಲ್ಲಿ ಆದಿ ಮಾನವರು ಕಾಡು ಪ್ರಾಣಿಗಳಿಂದ  ರಕ್ಷಿಸಲು ಇಂತಹ ಸುರಂಗ ಮಾದರಿ ಗುಹೆ ಇದಾಗಿರಲೂ ಬಹುದೆಂದು ಅಭಿಪ್ರಾಯಪಡಲಾಗಿದೆ. ಅಥವಾ ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ನಿರ್ಮಿಸಲಾದ ಗುಹೆ ಇರಬಹುದು ಎಂದು ಅಂದಾಜಿಸಲಾಗಿದೆ. ಇತಿಹಾಸ ತಜ್ಞರು, ಸಂಶೋಧಕರು ಅಧ್ಯಯನದ ಬಗ್ಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

- Advertisement -
spot_img

Latest News

error: Content is protected !!