Sunday, May 5, 2024
Homeತಾಜಾ ಸುದ್ದಿಪ್ರತಾಪ್ ಸಿಂಹಗೆ ಈ ಬಾರಿ ಕೈ ತಪ್ಪುತ್ತಾ ಲೋಕಸಭಾ ಟಿಕೆಟ್?; ರಾತ್ರಿ ಫೇಸ್ ಬುಕ್ ಲೈವ್...

ಪ್ರತಾಪ್ ಸಿಂಹಗೆ ಈ ಬಾರಿ ಕೈ ತಪ್ಪುತ್ತಾ ಲೋಕಸಭಾ ಟಿಕೆಟ್?; ರಾತ್ರಿ ಫೇಸ್ ಬುಕ್ ಲೈವ್ ಬಂದು ಭಾವುಕರಾದ ಸಂಸದ

spot_img
- Advertisement -
- Advertisement -

ಮೈಸೂರು; ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಈ ಬಾರಿ ಕರ್ನಾಟಕದಲ್ಲಿ ಟಿಕೆಟ್ ಯಾರಿಗೆಲ್ಲಾ ಸಿಗುತ್ತೆ ಅನ್ನೋ ಲೆಕ್ಕಚಾರ ಕೂಡ ಜೋರಾಗಿ ನಡೆಯುತ್ತಿದೆ. ಹೀಗಿರುವಾಗಲೇ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗಲ್ಲ ಅನ್ನೋ ಬಗ್ಗೆ ಒಂದಷ್ಟು ಸುದ್ದಿಗಳು ಜೋರಾಗಿ ಕೇಳಿ ಬರುತ್ತಿದೆ. ಪ್ರತಾಪ್ ಬದಲಾಗಿ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡ್ತಾರೆ ಅಂತ ಹೇಳಲಾಗುತ್ತಿದೆ. ಈ ಎಲ್ಲಾ ಚರ್ಚೆಗಳು ಜೋರಾಗಿರುವಾಗಲೇ ನಿನ್ನೆ ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ಲೈವ್ ಬಂದು ಭಾವುಕರಾಗಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು ಸಾಕಷ್ಟು ವಿಚಾರಗಳನ್ನುಹೇಳಿದ್ದಾರೆ. ಮೈಸೂರಲ್ಲಿ ರಾಜಕಾರಣ ಮಾಡುವುದು ತುಂಬಾ ಕಷ್ಟ. ರಾಜರ ಊರು ಅಂದಮೇಲೆ ಚಾಡಿಕೋರರು, ಹೊಗಳುಭಟ್ಟರು ಎಲ್ಲರೂ ಇರುತ್ತಾರೆ. ಸಿದ್ದಾಂತ ಬೇರೂರುವುದು ಬಹಳ ಕಷ್ಟ. 1989ರಿಂದ ಮೈಸೂರಿನಲ್ಲಿ ಸತತವಾಗಿ ಎರಡನೇ ಸಲ ಯಾರನ್ನೂ ಗೆಲ್ಲಿಸಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ಅವರ ಮನೆ ಬಾಗಿಲು ಕಾಯುವವರು ಬೇಕು. ಜನರು ಹೋಗಿ ಬಾಗಿಲು ಕಾಯುವರು ಅವರಿಗೆ ಬೇಡ. ಮೈಸೂರಿನಲ್ಲಿ ಎರಡು ಬಾರಿ ರಾಜವಂಶಸ್ಥರನ್ನು ಸೋಲಿಸಿದ್ದಾರೆ. ಆದರೆ 40 ವರ್ಷಗಳಲ್ಲಿ ನಾನೊಬ್ಬನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದಾರೆ. ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ. ಆ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ನನಗೆ ಕೊಟ್ಟರೆ ನಾನು 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕಾರ್ಯಕರ್ತರು ನನ್ನ ಪರ ನಿಂತಿದ್ದಾರೆ ಎಂದು ತಿಳಿಸಿದರು.

ರಾಜಕೀಯದಲ್ಲಿ ದ್ವೇಷ ಅಸೂಯೇ ಸಹಜ ನನ್ನ ಕೆಲಸ ನೋಡಿ ಜನ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಕ್ಕೆ ನಿಂತಿದ್ದಾರೆ ಸಾಕು. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ. 28 ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಎಂಪಿ ಪರವಾಗಿ ಜನ ನಿಂತಿಲ್ಲ. ನನ್ನ ಪರವಾಗಿ ನಿಂತಿದ್ದಾರೆ. ದೇಶಕ್ಕೆ ಮೋದಿ ಹೇಗೆ ಬೇಕೋ ಹಾಗೇ ಆಯಾ ಕ್ಷೇತ್ರಕ್ಕೆ ಒಬ್ಬೊಬ್ಬ ಛೋಟಾ ಮೋದಿ ಬೇಕು ಅಂತಾ ಬಯಸುತ್ತಾರೆ. ದೇವರು ಆಶೀರ್ವಾದ ಇದ್ದರೆ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡುತ್ತೇನೆ. ಕೊಡಗಿಗೆ ಎರಡು ಅವಧಿಯಲ್ಲಿ ಸ್ವಲ್ಪ ಕಡಿಮೆ ಕೆಲಸ ಮಾಡಿದ್ದೆ. ಕೊಡಗಿನ ಋಣ ತೀರಿಸಬೇಕಿದೆ. ಆ ಕೆಲಸವನ್ನು ಮೂರನೇ ಬಾರಿಯ ಅವಧಿಯಲ್ಲಿ ಮಾಡುತ್ತೇನೆ. ಮೈಸೂರಿಗೆ ಅತಿ ಹೆಚ್ಚಿನ ಕೆಲಸ ಮಾಡಿರುವುದಾಗಿ ತಿಳಿಸಿದರು.ಅಲ್ಲದೇ ನಾನು ಈವರೆಗೆ ನನ್ನ ಕ್ಷೇತ್ರಕ್ಕೆ ಏನೇ ಕೆಲಸಗಳು ಆಗಬೇಕಾದರೆ ದೇವರ ಮೊರೆ ಹೋಗುತ್ತಿದೆ. ದೇವರಿಗೆ ಹರಕೆ ಹೇಳಿ ಆ ಕೆಲಸ ಆಗುವಂತೆ ಪ್ರಾರ್ಥಿಸುತ್ತಿದೆ. ನನಗಾಗಿ ನಾನು ಏನೂ ಬೇಡಿಲ್ಲ. ಕ್ಷೇತಕ್ಕಾಗಿ ದೇವರ ಮೊರೆ ಹೋಗಿದ್ದೇನೆ ಎಂದು ಭಾವುಕರಾಗಿದ್ದಾರೆ.

- Advertisement -
spot_img

Latest News

error: Content is protected !!