Tuesday, June 30, 2026
Homeಕರಾವಳಿಬೆಳ್ತಂಗಡಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ರಿಲ್ಯಾಕ್ಸ್ ಆಗಿ ಮುಂದೆ ಸಾಗಿದ...

ಬೆಳ್ತಂಗಡಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ರಿಲ್ಯಾಕ್ಸ್ ಆಗಿ ಮುಂದೆ ಸಾಗಿದ ಗಜರಾಜ

- Advertisement -
- Advertisement -

ಬೆಳ್ತಂಗಡಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ನುಗ್ಗಿದ ಆನೆ ಕರಂಬಾರು ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಮತ್ತೆ ಕಂಡು ಬಂದಿದೆ. ನೇತ್ರಾವತಿಯಲ್ಲಿ ಹಾಯಾಗಿ ತಿರುಗಾಡುತ್ತಿರುವ ಆನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.

ಈ ಆನೆ ಕೊಯ್ಯೂರು, ಕಣಿಯೂರು ದಾಟಿ ಮಲೆಂಗಲ್ಲು, ಪದ್ಮುಂಜ ಪೊಯ್ಯ ಮೂಲಕ ಮೊಗ್ರು ಗ್ರಾಮದ ಬುಳೇರಿಗೆ ಬಂದು ಕರಂಬಾರು ಸುದೆಪಿಲ ಸಮೀಪ ನೇತ್ರಾವತಿಯಲ್ಲಿ ಸ್ನಾನ ಮಾಡಿ ರಿಲ್ಯಾಕ್ಸ್ ಆಗಿದೆ. ಬಳಿಕ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚರಿಸಿದೆ. ಆದರೆ ಮತ್ತೆ ಈ ಒಂಟಿ ಸಲಗ ಎಲ್ಲಿ ಪ್ರತ್ಯಕ್ಷವಾಗಲಿದೆ ಎಂಬ ಭಯ ಸ್ಥಳೀಯರಲ್ಲಿ ಕಾಡತೊಡಗಿದೆ. ಸದ್ಯ ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಆರಂಭವಾಗಿದೆ.

- Advertisement -

Latest News

error: Content is protected !!