Monday, June 8, 2026
Homeಕರಾವಳಿಬೆಳ್ತಂಗಡಿ:ಮಡಂತ್ಯಾರಿನಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಕಾರು: ಸಹೋದರರಿಬ್ಬರಿಗೆ ಗಾಯ

ಬೆಳ್ತಂಗಡಿ:ಮಡಂತ್ಯಾರಿನಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಕಾರು: ಸಹೋದರರಿಬ್ಬರಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ; ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟ‌ನೆ ಮಡಂತ್ಯಾರಿನಲ್ಲಿ ಬಳಿ ನಡೆದಿದೆ.

ಮದ್ದಡ್ಕ ಹಮೀದ್ ಅವರ ಮಗ ಮೊಹಮ್ಮದ್ ಇಂತಿಯಾಝ್, ಹಾಗೂ ಇರ್ಫಾನ್ ಗಾಯಗೊಂಡವರು. ಘಟನೆಯಲ್ಲಿ ಇಂತಿಯಾಝ್ ಗೆ ಗಂಭೀರ ಗಾಯಗೊಂಡಿದ್ದು ಅವರನ್ನು ಕಂಕನಾಡಿ ಪಾಧರ್ ಮಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು‌ ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈತ ಇನ್ನಿತರ ವಾಹನಗಳಿಗೂ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದು, ಕಾರನ್ನು ಸಾರ್ವಜನಿಕರು‌ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ‌.

- Advertisement -

Latest News

error: Content is protected !!