Tuesday, May 14, 2024
Homeಕರಾವಳಿರಾಮಾಯಣ ಪರೀಕ್ಷೆಯಲ್ಲಿ ಮುಸ್ಲಿಂ ಯುವಕರೇ ಟಾಪರ್ಸ್ :ಕೋಮು ದಳ್ಳುರಿಯ ನಡುವೆ ಹೀಗೊಂದು ಸಾಮರಸ್ಯದ ಸಂದೇಶ

ರಾಮಾಯಣ ಪರೀಕ್ಷೆಯಲ್ಲಿ ಮುಸ್ಲಿಂ ಯುವಕರೇ ಟಾಪರ್ಸ್ :ಕೋಮು ದಳ್ಳುರಿಯ ನಡುವೆ ಹೀಗೊಂದು ಸಾಮರಸ್ಯದ ಸಂದೇಶ

spot_img
- Advertisement -
- Advertisement -

ಕೇರಳ: ದೇಶದಲ್ಲಿ ಕೋಮು ಸಂಘರ್ಷದಿಂದಾಗಿ ಯಾವ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದನ್ನು ನಾವು ನೀವು ನೋಡುತ್ತಲೇ ಇದೆ.ಹೀಗಿರುವಾಗಲೇ ಕೇರಳದಲ್ಲಿ ಸಾಮರಸ್ಯ ಬೆಸೆಯುವಂತಹ ಘಟನೆಯೊಂದು ನಡೆದಿದೆ.

ಬಸಿತ್ ಹಾಗೂ ಮೊಹಮ್ಮದ್ ಜಬೀರ್ ಎಂಬ ಮುಸ್ಲಿಂ ಯುವಕರು ಪುಸ್ತಕ ಪ್ರಕಾಶನ ಕಂಪನಿಯೊಂದು ಆನ್ಲೈನ್ ಮೂಲಕ ನಡೆಸಿದ ರಾಮಾಯಣ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾರೆ.

ಉತ್ತರ ಕೇರಳ ಭಾಗದ ವಲಂಚೇರಿಯಲ್ಲಿರುವ ಕೆಕೆಎಸ್​ಎಂ ಇಸ್ಲಾಮಿಕ್ ಅಂಡ್ ಆರ್ಟ್ಸ್​ ಕಾಲೇಜಿನಲ್ಲಿ ಎಂಟು ವರ್ಷದ ವಾಫಿ ಪ್ರೊಗ್ರಾಮ್ ಅಧ್ಯಯನ ಮಾಡುತ್ತಿದ್ದಾರೆ. ರಾಮಾಯಣ ಮಾಸಿಕದ ಅಂಗವಾಗಿ ಕಳೆದ ತಿಂಗಳು ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಇವರಿಬ್ಬರು ಪ್ರಥಮ ಐದು ವಿಜೇತರಲ್ಲಿ ಸ್ಥಾನ ಗಳಿಸಿದ್ದಾರೆ. ಇಸ್ಲಾಮಿಕ್ ಕಾಲೇಜಿನ ವಿದ್ಯಾರ್ಥಿಗಳು ರಾಮಾಯಣ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ಸಾಕಷ್ಟು ಗಮನ ಸೆಳೆದಿದೆ. ಅಲ್ಲದೆ ವಿವಿಧ ಸಮುದಾಯಗಳ ಗಣ್ಯರು ಈ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ. ಅಲ್ಲದೇ ಧರ್ಮ ಸಂಘರ್ಷಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಧರ್ಮಗಳು ಒಂದೇ ಎಂಬ ಸಂದೇಶ ಸಾರಿದ್ದಾರೆ.

- Advertisement -
spot_img

Latest News

error: Content is protected !!