Saturday, June 6, 2026
Homeಕರಾವಳಿಭೀಕರ ಕಾರು ಅಪಘಾತ; ಕೇಂದ್ರ ಸಚಿವ ಶ್ರೀಪಾದ್ ನಾಯಕ್ಗೆ ಗಂಭೀರ ಗಾಯ, ಪತ್ನಿ ಸಾವು

ಭೀಕರ ಕಾರು ಅಪಘಾತ; ಕೇಂದ್ರ ಸಚಿವ ಶ್ರೀಪಾದ್ ನಾಯಕ್ಗೆ ಗಂಭೀರ ಗಾಯ, ಪತ್ನಿ ಸಾವು

- Advertisement -
- Advertisement -

ಕಾರವಾರ : ಭೀಕರ ರಸ್ತೆ ಅಪಘಾತದಲ್ಲಿ ಕೇಂದ್ರ ಆಯುಷ್ ಶ್ರೀಪಾದ್ ನಾಯಕ್ ಪತ್ನಿ ಹಾಗೂ ಸಚಿವರ ಆಪ್ತ ಸಹಾಯಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.

ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಯಲ್ಲಾಪುರದ ಗಂಟೆ ಗಣಪತಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಗೋಕರ್ಣಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಎಸ್ಕಾರ್ಟ ವಾಹನವನ್ನು ಸಚಿವರ ವಾಹನ ಚಾಲಕ ಓವರ್ ಟೇಕ್ ಮಾಡಲು ಹೋಗಿ ,ವಾಹನ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಇದರ ರಭಸಕ್ಕೆ ಕಾರಿನಲ್ಲಿದ್ದ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯ ನಾಯಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಯಿಂದ ಸಚಿವರಾದ ಶ್ರೀಪಾದ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಣಜಿಯ ಬಾಂಬೂಲಿಯಮ್ ಆಸ್ಪತ್ರೆಗೆ ಅಂಬುಲೆನ್ಸzನಲ್ಲಿ ಸಾಗಿಸಲಾಗಿದೆ

- Advertisement -

Latest News

error: Content is protected !!