Wednesday, April 16, 2025
Homeಅಪರಾಧಮಹಿಳೆಗೆ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ 8.8 ಲ.ರೂ. ವಂಚನೆ; ಪ್ರಕರಣ ದಾಖಲು

ಮಹಿಳೆಗೆ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ 8.8 ಲ.ರೂ. ವಂಚನೆ; ಪ್ರಕರಣ ದಾಖಲು

spot_img
- Advertisement -
- Advertisement -

ಕುಂದಾಪುರ: ಮುಂಬಯಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ ಮಹಿಳೆಯೊಬ್ಬರಿಂದ 8.8 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.

ವಂಚನೆಗೊಳಗಾದವರು ಹಂಗಳೂರಿನ ಭವಿಷ್ಯ ಎ. (30) ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ: ಭವಿಷ್ಯ ಅವರಿಗೆ ಕರೆ ಮಾಡಿದ ವ್ಯಕ್ತಿಯು ಫೆಡೆಕ್ಸ್‌ ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದು, ನಂತರದಲ್ಲಿ ಭವಿಷ್ಯ ಅವರ ಆಧಾರ್‌ ನಂಬರ್‌ನಿಂದ ಮುಂಬಯಿಯಿಂದ ಇರಾನ್‌ಗೆ ಒಂದು ಪಾರ್ಸೆಲ್‌ ಹೋಗುತ್ತಿದ್ದು, ಅದರಲ್ಲಿ ಕಾನೂನುಬದ್ಧವಲ್ಲದ ವಸ್ತುಗಳು ಇರುವುದರಿಂದ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದ. ಹಾಗೆಯೇ ಸೈಬರ್‌ ಕ್ರೈಂಗೆ ದೂರು ನೀಡುವಂತೆ ತಿಳಿಸಿ ಮುಂಬಯಿ ಕ್ರೈಂ ಬ್ರ್ಯಾಂಚ್‌ಗೆ ಕರೆ ಸಂಪರ್ಕಗೊಳಿಸುವುದಾಗಿ ಹೇಳಿ, ಮಹಿಳೆಯೊಬ್ಬರ ಬಳಿ ಮಾತನಾಡಿಸಿದ್ದಾನೆ. ಹಾಗೆಯೇ ಭವಿಷ್ಯ ಅವರ ಆಧಾರ್‌ ಕಾರ್ಡ್‌ ಇತ್ಯಾದಿ ವಿವರಗಳನ್ನು ಕಳುಹಿಸುವಂತೆ ತಿಳಿಸಿ, ಆಧಾರ್‌ ನಂಬರ್‌ನಿಂದ 25 ಬ್ಯಾಂಕ್‌ ಆಕೌಂಟ್‌ ಇದ್ದು, ನಿಮ್ಮ ಖಾತೆಯಿಂದ ಮನಿ ಲ್ಯಾಂಡರಿಂಗ್‌ ಆಗುತ್ತಿರುವುದಾಗಿ ಹೇಳಿದ್ದಾರೆ.

ಇನ್ನು ಆ ಅಕೌಂಟ್‌ನಿಂದ ಇನ್‌ಸ್ಟಂಟ್‌ ಲೋನ್‌ ಮಾಡಿದರೆ ಮೋಸಗಾರರನ್ನು ಪತ್ತೆ ಮಾಡಬಹುದು ಎಂದು ಯಾಮಾರಿಸಿ 8,78,760 ರೂ. ಲೋನ್‌ ಮಾಡಿಸಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣ ಉಪಯೋಗಿಸಿಕೊಂಡು ಭವಿಷ್ಯ ಅವರ ಬ್ಯಾಂಕ್‌ ಖಾತೆಯಲ್ಲಿದ್ದ 8,87,307 ರೂ. ಅನ್ನು ವಂಚಕರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಭವಿಷ್ಯ ಅವರುಯ ಪ್ರಕರಣವನ್ನ ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!