Thursday, June 4, 2026
Homeಕರಾವಳಿಉಡುಪಿಕುಂದಾಪುರ : ಮನೆಗೆ ಮರಳಿದ ನಾಪತ್ತೆಯಾಗಿದ್ದ ಮಹಿಳೆ

ಕುಂದಾಪುರ : ಮನೆಗೆ ಮರಳಿದ ನಾಪತ್ತೆಯಾಗಿದ್ದ ಮಹಿಳೆ

- Advertisement -
- Advertisement -

ಕುಂದಾಪುರ : ಜೂ.10 ರಂದು ಕೋಡಿ ಸೇತುವೆಯಲ್ಲಿ ಅವರ ಸ್ಕೂಟರ್, ಚಪ್ಪಲಿ, ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ವಿಠಲವಾಡಿ ನಿವಾಸಿ ಹೀನಾ ಕೌಸರ್ (32) ಮರಳಿ ಮನೆಗೆ ಬಂದಿದ್ದಾರೆ.

ಹೀನಾ ಕೌಸರ್ ಕೋಡಿ ಸೇತುವೆಯಲ್ಲಿ ಅವರ ಸ್ಕೂಟರ್, ಚಪ್ಪಲಿ, ಡೆತ್ ನೋಟ್ ಪತ್ತಾಯದ ಬೆನ್ನಲ್ಲೇ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.ಇದೀಗ ಮನೆಗೆ ವಾಪಾಸ್ ಆಗಿದ್ದು ಪೊಲೀಸ್ ವಿಚಾರಣೆ ವೇಳೆ ಅಬಿದಾ ಎಂಬಾಕೆಯ ಟಾರ್ಚ‌್ರನಿಂದ ಡಿಪ್ರೆಶನ್‌ಗೆ ಒಳಗಾಗಿದ್ದೆ. ಹಾಗಾಗಿ ಆತ್ಮಹತ್ಯೆ ಮಾಡಲು ಬೆಳ್ಳಂಬೆಳ್ಳಗ್ಗೆ ಕೋಡಿ ಸೇತುವೆ ಬಳಿ ಹೋದೆ. ಅಲ್ಲಿ ನದಿಗೆ ಜಿಗಿಯಲು ಹೊರಟಾಗ ಮೀನುಗಾರರಿದ್ದ ಕಾರಣ ಮನಸ್ಸು ಬದಲಿಸಿ ಮಂಗಳೂರಿಗೆ ಹೋದೆ. ಅಲ್ಲಿಂದ ಉಳ್ಳಾಲ ದರ್ಗಾ ಸೇರಿಕೊಂಡೆ ಎಂದಿದ್ದಾರೆ.

ಇತ್ತ ಹೀನಾ ನಾಪತ್ತೆ ಬೆನ್ನಲ್ಲೇ ಸಾಹಿಲ್ ಎಂಬಾತ ಕಾಣೆಯಾಗಿದ್ದ ಏನಾದರೂ ಲಿಂಕ್ ಇದೆಯಾ ಎಂಬ ಪ್ರಶ್ನೆಗೆ, ನನಗೂ ಅದಕ್ಕೂ ಸಂಬಂಧವಿಲ್ಲ. ಅವನೆಲ್ಲಿದ್ದಾನೆ ಅಂತಾ ನಂಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಹೆಮ್ಮಾಡಿಯ ಸಾಹಿಲ್ ಕೂಡ ಮನೆಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!