Tuesday, July 14, 2026
Homeಕರಾವಳಿಉಡುಪಿಉಡುಪಿ; ಮೀಶೋ ಕಾಲ್ ಎಂದು ನಂಬಿ ಹಣ ಕಳೆದುಕೊಂಡ ಮಹಿಳೆ

ಉಡುಪಿ; ಮೀಶೋ ಕಾಲ್ ಎಂದು ನಂಬಿ ಹಣ ಕಳೆದುಕೊಂಡ ಮಹಿಳೆ

- Advertisement -
- Advertisement -

ಉಡುಪಿ; ಮೀಶೋ ಕಾಲ್ ಎಂದು ನಂಬಿ ಮಹಿಳೆಯೊಬ್ಬರು ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಶುಭಾ ಮೋಸ ಹೋದ ಮಹಿಳೆ.

ಎರಡು ವರ್ಷದ ಹಿಂದೆಯೇ ಶುಭಾ ಮೀಶೋದಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಆದರೆ ಅದು ತಾನಾಗಿಯೇ ರದ್ದುಗೊಂಡಿತ್ತು.ಆದರೆ ಹಣ ಪಾವತಿಯಾಗಿರಲಿಲ್ಲ. ಆನಂತರ ಅಪರಿಚಿತ ವ್ಯಕ್ತಿಯೋರ್ವ ಕರೆಮಾಡಿ ಮೀಶೋದಿಂದ ಮಾತನಾಡುವಂತೆ ನಿಮ್ಮ ಆರ್ಡರ್ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತೇವೆಂದು ಒಟಿಪಿ ಪಡೆದುಕೊಂಡಿದ್ದಾರೆ.

ನಂತರ ಶುಭಾ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ನಲ್ವತ್ತು ಸಾವಿರದ ಐನೂರು ರೂಪಾಯಿ ವರ್ಗಾಯಿಸಿಕೊಂಡು ಅವರನ್ನು ನಂಬಿಸಿ ವಂಚಿಸಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!