Monday, April 29, 2024
Homeಕರಾವಳಿಕಾಸರಗೋಡುಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ವ್ಯಕ್ತಿಯ ಜೀವ ಉಳಿಸಿದ ಉದ್ಯಮಿ

ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ವ್ಯಕ್ತಿಯ ಜೀವ ಉಳಿಸಿದ ಉದ್ಯಮಿ

spot_img
- Advertisement -
- Advertisement -

ಅಬುದಾಭಿ: ಅಬುದಾಬಿಯಲ್ಲಿ ಮರಣದಂಡನೆಗೊಳಗಾಗಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಉದ್ಯಮಿಯೊಬ್ಬರು ಬೆನ್ನಿಗೆ ನಿಂತು ಜೀವದಾನ ಮಾಡಿದ್ದಾರೆ. ಕೇರಳದ  ಬೆಕ್ಸ್‌ ಕೃಷ್ಣನ್‌ ಅವರಿಗೆ ಉದ್ಯಮಿ ಎಂ.ಎ.ಯೂಸುಫ್ ಅಲಿ ಜೀವದಾನ ಮಾಡಿದ್ದಾರೆ.

2012ರಲ್ಲಿ  ಬೆಕ್ಸ್ ಕೃಷ್ಣನ್ ಅವರು ಬೇಕಾಬಿಟ್ಟಿ ಕಾರು ಚಲಾಯಿಸಿದ್ದರಿಂದ ಸೂಡಾನ್‌ನ ಬಾಲಕ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಅವರಿಗೆ ಯುಎಇ ಸುಪ್ರೀಂ ಕೋರ್ಟ್‌ ಮರಣದಂಡನೆ ವಿಧಿಸಿತ್ತು. ಕೃಷ್ಣನ್‌ ಕುಟುಂಬ ಖ್ಯಾತ ಉದ್ಯಮಿ, ಲುಲು ಗ್ರೂಪ್‌ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ  ಅವರಿಗೆ ಪರಿಸ್ಥಿತಿಯನ್ನು ವಿವರಿಸಿತ್ತು. ಅದರಂತೆ 1 ಕೋಟಿ ರೂ. ಪರಿಹಾರ ನೀಡಿ ಅಲಿ ರಕ್ಷಿಸಿದ್ದಾರೆ.  

ಬಾಲಕನ ಕುಟುಂಬವನ್ನು ಸುಡಾನ್‌ನಿಂದ ಕರೆಯಿಸಿಕೊಂಡು ಕುಟುಂಬಕ್ಕೆ ಅಲಿ, ತಾವೇ 1 ಕೋಟಿ ರೂ. ಪರಿಹಾರಧನ ನೀಡಿದ್ದಾರೆ. ಬಳಿಕ ಕುಟುಂಬ ಕೃಷ್ಣನ್‌ರನ್ನು ಕ್ಷಮಿಸಲು ಒಪ್ಪಿತು. ಸುಪ್ರೀಂ ಕೋರ್ಟ್‌ ಕೂಡ ಕೃಷ್ಣನ್‌ ಅವರನ್ನು ಬಿಡುಗಡೆ ಮಾಡಿದೆ. 9 ವರ್ಷಗಳ ಅನಂತರ ಕೃಷ್ಣನ್‌ ಜೈಲಿನಿಂದ ಸದ್ಯದಲ್ಲೇ ಹೊರಬರಲಿದ್ದಾರೆ. ಒಮ್ಮೆ ಯೂಸುಫ್ ಅಲಿಯನ್ನು ನೋಡಿ, ಕೇರಳಕ್ಕೆ ಬರುವುದು ಕೃಷ್ಣನ್‌ ಅವರ ಮುಂದಿನ ಗುರಿ.

- Advertisement -
spot_img

Latest News

error: Content is protected !!