Saturday, June 6, 2026
Homeತಾಜಾ ಸುದ್ದಿಬಸ್ ಢಿಕ್ಕಿ : 6 ಮಂದಿ ವಲಸೆ ಕಾರ್ಮಿಕರು ಸಾವು, 2 ಗಂಭೀರ

ಬಸ್ ಢಿಕ್ಕಿ : 6 ಮಂದಿ ವಲಸೆ ಕಾರ್ಮಿಕರು ಸಾವು, 2 ಗಂಭೀರ

- Advertisement -
- Advertisement -

ಮುಜಾಫರ್ ನಗರ್ : ದೇಶದೆಲ್ಲೆಡೆ ಮಾರಕ ಕೋವಿಡ್ 19 ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ, ವಾಹನಗಳ ಸಂಚಾರ ಆರಂಭವಾಗುತ್ತಿದ್ದಂತೆ, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದ್ಯಾಕೋ ಈ ಅಪಘಾತಗಳ ಗುರಿ ಕೂಡ ವಲಸೆ ಕಾರ್ಮಿಕರು, ಅವರನ್ನೇ ಹೆಚ್ಚಾಗಿ ಬಲಿಪಡೆಯುತ್ತಿದೆ .

ಇತ್ತೀಚಿಗೆ ಮಹಾರಾಷ್ಟ್ರದ ರೈಲು ಹಳಿ ದುರಂತದಲ್ಲಿ ಕೆಲವು ಕಾರ್ಮಿಕರು ಜೀವ ಕಳೆದುಕೊಂಡಿದ್ದರು , ಇದೀಗ ಮತ್ತೊಂದು ಅಪಘಾತ ಮುಜಾಫರ್ ನಗರ್ ಪ್ರದೇಶದಲ್ಲಿ ನಡೆದಿದೆ. ಮುಜಾಫರ್ ನಗರ್-ಶರಣ್ ಪುರ್ ಹೆದ್ದಾರಿ ಮೂಲಕ ವೇಗವಾಗಿ ಚಲಿಸುತ್ತಿದ್ದ ಬಸ್ ಒಂದು ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಹರಿದು ಆರು ಜನ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ . ಈ ಕಾರ್ಮಿಕರು ಕಾಲ್ನಡಿಗೆಯಲ್ಲಿ ಪಂಜಾಬ್‌ನಿಂದ ಬಿಹಾರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!