Saturday, June 6, 2026
Homeಉತ್ತರ ಕನ್ನಡಅಂಗಡಿಗೆ ತೆರಳಿದ್ದ ಬಾಲಕನ ಅಪಹರಣ ಶಂಕೆ

ಅಂಗಡಿಗೆ ತೆರಳಿದ್ದ ಬಾಲಕನ ಅಪಹರಣ ಶಂಕೆ

- Advertisement -
- Advertisement -

ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಆಜಾದ್ ನಗರದಲ್ಲಿ ಅಂಗಡಿಗೆ ತೆರಳಿದ್ದ ಬಾಲಕನನ್ನು ಅಪಹರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಪರಿಚಿತರು ಕಾರಿನಲ್ಲಿ ಬಂದು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಅಲಿ ಇಸ್ಲಾಂ ಸಾದಾ(8)ನಾಪತ್ತೆಯಾಗಿರುವ ಬಾಲಕ. ನಿನ್ನೆ ಸಂಜೆ ವೇಳೆ ಅಲಿ ಇಸ್ಲಾಂ ಬ್ರೆಡ್ ತರಲು ಅಂಗಡಿಗೆ ಹೋಗಿದ್ದನು.ಅಂಗಡಿಗೆ ಹೋದವನು ವಾಪಸ್ ಬಾರದಿದ್ದರಿಂದ ಆತಂಕಗೊಂಡ ಕುಟುಂಬಸ್ಥರಿಂದ ಹುಡುಕಾಟ ನಡೆಸಿದ್ದಾರೆ.

ಅಕ್ಕಪಕ್ಕದ ಮನೆಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಬಾಲಕನನ್ನು ಕಿಡ್ನ್ಯಾಪ್ ಮಾಡಿರುವುದು ಕಂಡು ಬಂದಿದೆ.ಬಾಲಕ ನಡೆದು ಹೋಗುವ ವೇಳೆ ಅಪರಿಚಿತರು ಕಾರಿನಲ್ಲಿ ಬಂದು ಎಳೆದೊಯ್ದಿದ್ದಾರೆ.ಸಿಸಿ ಕ್ಯಾಮೆರಾದಲ್ಲಿ ಅಪಹರಣದ ದೃಶ್ಯ ಸೆರೆಯಾಗಿದೆ.

ಬಾಲಕನನ್ನ ಕಿಡ್ನ್ಯಾಪ್ ಮಾಡಿದ ಬಳಿಕ ಆಜಾದ್ ನಗರದ ಮೊದಲ ಕ್ರಾಸ್‌ನಲ್ಲಿ ಜಾಲಿ ಕಡೆಗೆ ಕಾರು ಹೋಗಿದೆ. ಬಾಲಕನ ಕುಟುಂಬಸ್ಥರಿಂದ ಭಟ್ಕಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!