Thursday, June 4, 2026
Homeಉತ್ತರ ಕನ್ನಡಭಟ್ಕಳ: ಬೈಕ್‌ ಅಪಘಾತದಿಂದ ಭಯಗೊಂಡು ಹೃದಯಾಘಾತದಿಂದ ಬಾಲಕ ಮೃತ್ಯು

ಭಟ್ಕಳ: ಬೈಕ್‌ ಅಪಘಾತದಿಂದ ಭಯಗೊಂಡು ಹೃದಯಾಘಾತದಿಂದ ಬಾಲಕ ಮೃತ್ಯು

- Advertisement -
- Advertisement -

ಭಟ್ಕಳ: ಬೈಕ್ ಅಪಘಾತದಿಂದ ಭಯಪಟ್ಟು ಬಾಲಕನೊಬ್ಬ ಹೃದಯಾಘಾತಕ್ಕೊಳಗಾದ ಘಟನೆ ಭಟ್ಕಳದಲ್ಲಿ ನಡೆದಿದೆ.  9ನೇ ತರಗತಿ ಓದುತ್ತಿದ್ದ ಅಬ್ದುಲ್ಲಾ(14) ಮೃತಪಟ್ಟ ಬಾಲಕ.

ನಿನ್ನೆ ರಾತ್ರಿ ಬಾಲಕ ಅಬ್ದುಲ್ಲಾ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಇನ್ನೊಂದು ಬೈಕ್ ಈತನ ಬೈಕ್ ಗೆ ತಾಗಿದೆ. ಆಗ ಬೈಕ್‌ ಸಮೇತ ಬಾಲಕ ಅಬ್ದುಲ್ಲಾ ಕೆಳಗೆ ಬಿದ್ದಿದ್ದಾನೆ.ಈ ವೇಳೆ ಜನ ಜಮಾಯಿಸುತ್ತಿದ್ದಂತೆ ಭಯಗೊಂಡ ಅಬ್ದುಲ್ಲಾ ಅಲ್ಲಿಯೇ ಕುಸಿದುಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತಾದ್ರೂ ಆತ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!