Monday, June 8, 2026
Homeಕರಾವಳಿಸುರತ್ಕಲ್:‌ ಪೋಷಕರ ಸಭೆಯಲ್ಲಿ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಅರೆಸ್ಟ್

ಸುರತ್ಕಲ್:‌ ಪೋಷಕರ ಸಭೆಯಲ್ಲಿ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಅರೆಸ್ಟ್

- Advertisement -
- Advertisement -

ಸುರತ್ಕಲ್:‌ ಶಾಲೆಯಲ್ಲಿ ಪೋಷಕರ ಸಭೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಏಕಾಏಕಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿರೋ ಘಟನೆ ಕಾಟಿಪಳ್ಳ ಎರಡನೇ ಬ್ಲಾಕ್ ಶಂಶುದ್ದೀನ್ ವೃತ್ತದ ಬಳಿಯ ನೂರ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.

ಕಾಟಿಪಳ್ಳ ನಾರಾಯಣಗುರು ಶಾಲೆಯ ಬಳಿ ನಿವಾಸಿ ಚಂದ್ರಕಲಾ ಹಲ್ಲೆಗೊಳಗಾದ ಶಿಕ್ಷಕಿ. ಘಟನೆಯಿಂದ ಗಾಯಗೊಂಡ ಶಿಕ್ಷಕಿ ಸದ್ಯ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆಗೆ ವಿದ್ಯಾರ್ಥಿಯೊಬ್ಬನ ತಾಯಿ ಹಾಗೂ ಶಿಕ್ಷಕಿಯ ನಡುವಿನ ವ್ಯವಹಾರವೇ ಕಾರಣ ಎನ್ನಲಾಗಿದೆ. ಪೋಷಕರ ಸಭೆಯಲ್ಲಿ ಈ ಬಗ್ಗೆ ಶಿಕ್ಷಕಿ ಪ್ರಸ್ತಾಪಿಸುತ್ತಿದ್ದಂತೆ ವಿದ್ಯಾರ್ಥಿ ತಂದೆ ಹನೀಫ್‌ ಎಂಬಾತ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಸುರತ್ಕಲ್ ಠಾಣೆಯ ಪಿಎಸ್‌ಐ ಪುನೀತ್ ಗಾಂವ್ಕರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿರುದ್ಧ ಮಹಿಳಾ ದೌರ್ಜನ್ಯ, ಹಲ್ಲೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!