Wednesday, June 3, 2026
Homeತಾಜಾ ಸುದ್ದಿಮನೆಯಲ್ಲಿ ಸಾಕಿದ್ದ ಹಸುವೇ ತಿವಿದು ಬಾಲಕ ಸಾವು

ಮನೆಯಲ್ಲಿ ಸಾಕಿದ್ದ ಹಸುವೇ ತಿವಿದು ಬಾಲಕ ಸಾವು

- Advertisement -
- Advertisement -

ಮಂಡ್ಯ:  ಮನೆಯಲ್ಲಿ ಸಾಕಿದ್ದ ಹಸು ತಿವಿದು ಬಾಲಕನನ್ನು ಕೊಂದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಯತ್ತಂಬಾಡಿಯಲ್ಲಿ ನಡೆದಿದೆ. 13 ವರ್ಷದ ಬಾಲಕ ಮಾದೇಶ್ ಮೃತಪಟ್ಟ ದುರ್ದೈವಿ.

ನಿನ್ನೆ ರಾತ್ರಿ ಹಸುವಿಗೆ ಮಾದೇಶ ಹುಲ್ಲು ಹಾಕಲು ಹೋದಾಗ ಹಸು ತಿವಿದಿದೆ. ತೀವ್ರ ರಕ್ತಸ್ರಾವಕ್ಕೆ ಒಳಗಾದ ಬಾಲಕನನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!