Sunday, June 7, 2026
Homeತಾಜಾ ಸುದ್ದಿಕಮಿಷನ್ ಮತ್ತು ಕಾಂಗ್ರೆಸ್ ಎರಡೂ ಒಟ್ಟಿಗೇ ಹುಟ್ಟಿದ್ದು: ಕಮಿಷನ್ ಮೂಲಕ ಇಡೀ ವ್ಯವಸ್ಥೆ ಹಾಳು ಮಾಡಿದ...

ಕಮಿಷನ್ ಮತ್ತು ಕಾಂಗ್ರೆಸ್ ಎರಡೂ ಒಟ್ಟಿಗೇ ಹುಟ್ಟಿದ್ದು: ಕಮಿಷನ್ ಮೂಲಕ ಇಡೀ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತೆ: ಸಚಿವ ಸುನೀಲ್‌ ಕುಮಾರ್

- Advertisement -
- Advertisement -

ಬಾಗಲಕೋಟೆ; ಮಠ ಮಾನ್ಯಗಳಲ್ಲೂ ಅನುದಾನಕ್ಕೆ ಕಮಿಷನ್ ಆರೋಪದ ಬಗ್ಗೆ ಮಾತನಾಡಿದ ಸಚಿವ ಸುನೀಲಕುಮಾರ್, ಕಮಿಷನ್ ಮತ್ತು ಕಾಂಗ್ರೆಸ್ ಎರಡೂ ಒಟ್ಟಿಗೆ ಹುಟ್ಟಿದ್ದು ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಒಂದು ದಿನದ ಪ್ರವಾಸ ಕೈಗೊಂಡ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕಮಿಷನ್‌ ಮತ್ತು ಕಾಂಗ್ರೆಸ್‌ ಒಟ್ಟೊಟ್ಟಿಗೆ ಕಳೆದ 70 ವರ್ಷಗಳಿಂದ ದೇಶದಲ್ಲಿ ಬೆಳೀತಾ ಬಂದಿವೆ. ಕಾಂಗ್ರೆಸ್ ಎಲ್ಲಿಯ ತನಕ ಬೆಳೆಯುತ್ತದೆಯೋ ಅಲ್ಲಿ ತನಕ ಕಮಿಷನ್ ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ ಅಂದ್ರು.

ಹೀಗಾಗಿ ತಮ್ಮ ಕಾಲಾವಧಿ ಸರ್ಕಾರದ ಎಲ್ಲ ಹಂತದಲ್ಲಿ ಕಮಿಷನ್ ಮುಖಾಂತರ ಇಡೀ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದರು. ಇನ್ನು ಅದನ್ನ ಸರಿ ಮಾಡುವ ಪ್ರಯತ್ನ ನಮ್ಮ ಬಿಜೆಪಿ ಸರ್ಕಾರದಲ್ಲಿ ನಾವು ಮಾಡುತ್ತಿದ್ದೇವೆ. ನಾವು ಮೋದಿ ನೇತೃತ್ವದಲ್ಲಿ ನಡೆಸುತ್ತಿರುವ ಸರ್ಕಾರ ಇದು. ಹೀಗಾಗಿ ಯಾವುದೇ ಕಾರಣಕ್ಕೂ ಯಾವುದೇ ಹಂತದಲ್ಲಿ ಅವಕಾಶ ಕೊಡೋದಿಲ್ಲ. ಅದರ ನಿರೀಕ್ಷೆ ಮಾಡುವ ಪ್ರಶ್ನೆ ಇಲ್ಲ ಎಂದರು.

ಇನ್ನು  ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ದೂರ ದೃಷ್ಟಿವುಳ್ಳ ಬಜೆಟ್ ಕೊಡೋ ಮುಖಾಂತರ ರಾಜ್ಯದ ಜನರನ್ನು ಅಭಿವೃದ್ಧಿ ಕಡೆ ತೆಗೆದುಕೊಂಡು ಹೋಗೋ ನವ ಕರ್ನಾಟಕ ನಿರ್ಮಾಣದ ಕಡೆಗೆ ಪ್ರಯತ್ನ ಮಾಡಿದ್ದಾರೆ. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೆ, ಅದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನ ಕೊಟ್ಟರೆ ನಾನು ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಧರ್ಮದ ಕುರಿತಂತೆ ಸಾಧು ಸಂತರ ಬಗ್ಗೆ ನಮಗೆ ವಿಶೇಷವಾದ ಗೌರವ  ಇದೆ. ಹೀಗಾಗಿ ಯಾವುದನ್ನು ನೀವು ಬಹಿರಂಗವಾಗಿ ಹೇಳಿದ್ದಾರೋ ಆ ದಾಖಲೆಗಳನ್ನೂ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನೀವು ಬಹಿರಂಗವಾಗಿ ಕೊಡಬೇಕು ಅಂದ್ರು. ಬಹಿರಂಗವಾಗಿ ಕೊಡೋಕೆ ಆಗಲ್ಲ ಅಂದ್ರೆ, ಮುಖ್ಯಮಂತ್ರಿಗಳ ಹತ್ತಿರ ಬಂದು ಮಾತನಾಡಿ ದಾಖಲೆಗಳನ್ನ ಕೊಡಿ. ನಾವು ತನಿಖೆ ಮಾಡಲು ಸಿದ್ಧರಿದ್ದೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು

- Advertisement -

Latest News

error: Content is protected !!