Sunday, June 7, 2026
Homeಕರಾವಳಿಕಾಂಗ್ರೆಸ್‌ನವರಿಗೆ ಟಿಪ್ಪು ಮನೆದೇವರಾ? ನಳಿನ್‌

ಕಾಂಗ್ರೆಸ್‌ನವರಿಗೆ ಟಿಪ್ಪು ಮನೆದೇವರಾ? ನಳಿನ್‌

- Advertisement -
- Advertisement -

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಗ್ಗೆ ಇಷ್ಟು ವಿಷಕಾರುವ ಕಾಂಗ್ರೆಸ್‌ನವರಿಗೆ ಮೇಲುಕೋಟೆ ಅಯ್ಯಂಗಾರ್ ಹಾಗೂ ಕೊಡವರ ಮಾರಣಹೋಮ ನಡೆಸಿದ ಟಿಪ್ಪು ಮಾತ್ರ ಮನೆದೇವರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

ಹಿಂದೂಗಳನ್ನು ಮತಾಂತರಗೊಳಿಸಿ, ಹೆಣ್ಣುಮಕ್ಕಳನ್ನು ಅತ್ಯಾಚಾರಗೊಳಿಸುತ್ತಿದ್ದವ ಇವರಿಗೆ ಮಾದರಿ ಎಂದಾದರೆ ಭೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು? ಇನ್ನು ಸಿದ್ದರಾಮಯ್ಯ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಬರೀ ಗಿಮಿಕ್ ಎನ್ನುತ್ತಾರೆ. ಕಾಂಗ್ರೆಸ್‍ನ ಶಾಸಕ ತನ್ವಿರ್ ಸೇಠ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

- Advertisement -

Latest News

error: Content is protected !!