Wednesday, June 24, 2026
Homeತಾಜಾ ಸುದ್ದಿಬಿಜೆಪಿ‌ ಮತ್ತು ಜೆಡಿಎಸ್ ಪಕ್ಷದ ಹೊಂದಾಣಿಕೆ‌ ಹಾಲು‌- ಜೇನು ಇದ್ದಂತೆ: ಅಶೋಕ್ 

ಬಿಜೆಪಿ‌ ಮತ್ತು ಜೆಡಿಎಸ್ ಪಕ್ಷದ ಹೊಂದಾಣಿಕೆ‌ ಹಾಲು‌- ಜೇನು ಇದ್ದಂತೆ: ಅಶೋಕ್ 

- Advertisement -
- Advertisement -

ಬೀದರ್: ಈ ಹಿಂದೆ‌ ರಾಜ್ಯದಲ್ಲಿ ‌ಜೆಡಿಎಸ್- ಕಾಂಗ್ರೆಸ್ ಮೈತ್ರಿ‌ ಹಾಲು- ಹುಳಿಯಂತಿತ್ತು. ಆದರೆ ಬಿಜೆಪಿ‌ ಮತ್ತು ಜೆಡಿಎಸ್ ಹೊಂದಾಣಿಕೆ‌ ಹಾಲು‌- ಜೇನು ಇದ್ದಂತೆ.ಕಾಂಗ್ರೆಸ್ ಗೆದ್ದ ಬಳಿಕ ಕಾಂಗ್ರೆಸ್ ಹುಳಿ‌ ಹಿಂಡಿ‌ ಹಾಲು‌ ಕೆಟ್ಟು ಹೋಯಿತು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಅವರು ಬೀದರ್ ನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿ, ‘ರಾಜ್ಯದ ಒಳತಿಗಾಗಿ ಮುಂದಿನ‌ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರಬೇಕಿದೆ. ದೇಶದಲ್ಲಿ ಎನ್ ಡಿಎ ಬರಬೇಕಿದೆ,’ ಎಂದರು.

ಕಾಂಗ್ರೆಸ್ ಗೆ ಮಟ್ಟ ಹಾಕಲು‌ ಜೆಡಿಎಸ್ ನವರಲ್ಲಿ ಹುರುಪು ಬಂದಿದೆ. ನಮಗಿಂತ‌ ಮೊದಲೇ‌ ಸಭೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿ ಮೋದಿ ಪರ ಘೋಷಣೆ ಮಾಡುತ್ತಿದ್ದಾರೆ ಎಂದರು.

- Advertisement -

Latest News

error: Content is protected !!