Saturday, June 6, 2026
Homeಕರಾವಳಿ ಮತ್ತೆ ಮುಂದುವರಿದ ಕಳ್ಳರ ಕರಾಮತ್ತು; ಬೆಳ್ತಂಗಡಿಯಲ್ಲಿ ಹಾಡುಹಗಲೇ ಬೈಕ್ ಕಳ್ಳತನ

 ಮತ್ತೆ ಮುಂದುವರಿದ ಕಳ್ಳರ ಕರಾಮತ್ತು; ಬೆಳ್ತಂಗಡಿಯಲ್ಲಿ ಹಾಡುಹಗಲೇ ಬೈಕ್ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು  ಕಳೆದ ಶನಿವಾರ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಅಂಗಡಿಯೊಂದರ ಕಿಟಕಿ ಮುರಿದು ಕಳ್ಳರು ನುಗ್ಗಿ ಹಣ ಕಳ್ಳತನ ಮಾಡಿದ್ದು ಇಂದು ಕೂಡ ಕೆಲಸಕ್ಕೆಂದು ಬೈಕ್ ನಿಲ್ಲಿಸಿ ಹೋಗಿದ್ದು ಸಂಜೆ ವೇಳೆಗೆ ವಾಪಸ್ ಮನೆಗೆ ತೆರಳಲು ಬೈಕ್ ಬಳಿಗೆ ಬಂದಾಗ ಬೈಕ್ ಕಳ್ಳತನವಾಗಿದೆ‌.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಾವಿನಕಟ್ಟೆ ನಿವಾಸಿ ರವಿ ಎಂಬವರು ವಿದ್ಯುತ್ ಲೈನ್ ಕೆಲಸಕ್ಕೆ ಹೋಗಲು ಪಲ್ಸರ್ 150 ಬೈಕ್ ನಲ್ಲಿ ಬರುತ್ತಿದ್ದರು. ಬೈಕ್ ನ್ನು ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿಯ ಓಣಿಯಲ್ಲಿ ನಿಲ್ಲಿಸಿ ಹೋಗುತ್ತಿದ್ದರು. ಡಿ.22 ರಂದು ಬೆಳಗ್ಗೆ ಎಂದಿನಂತೆ 9:30 ಕ್ಕೆ ಬೈಕ್ ನಿಲ್ಲಿಸಿ ಹೋಗಿದ್ದರು ಸಂಜೆ 6:30 ಕ್ಕೆ ಮನೆಗೆ ತೆರಳಲು ಬೈಕ್ ಬಳಿ ಹೋದಾಗ ಬೈಕ್ ನಾಪತ್ತೆಯಾಗಿತ್ತು.  ಸುತ್ತಮುತ್ತ ಹುಡುಕಾಟ ನಡೆಸಿದರೂ ಪ್ರಯೋಜವಾಗಿಲ್ಲ. ಸ್ಥಳದಲ್ಲಿ ಉಳಿದ 6 ಬೈಕ್ ನಿಲ್ಲಿಸಿದ್ದಲ್ಲೇ ಇತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಎಎಸ್ಐ ದೇವಪ್ಪ ಮತ್ತು ಕ್ರೈಂ ಸಿಬ್ಬಂದಿ ಚರಣ್ ರಾಜ್ ಬಂದು ಪರಿಶೀಲನೆ ನಡಸಿದ್ದು. ಸುತ್ತಮುತ್ತಲಿನ ಸಿಸಿಕ್ಯಾಮರಾದ ಪರಿಶೀಲನೆಯಲ್ಲಿ ತೊಡಗಿದ್ದಾರೆ.

- Advertisement -

Latest News

error: Content is protected !!