Friday, May 17, 2024
Homeಕರಾವಳಿಉಡುಪಿಉಡುಪಿ; ಸ್ನೇಹಿತೆಯ ಮನೆಗೇ ಕನ್ನ ಹಾಕಿದ ಕಳ್ಳಿ ಅಂದರ್: ಕಳ್ಳತನಕ್ಕೆ ಹೇಗೆಲ್ಲಾ ಪ್ಲ್ಯಾನ್ ಮಾಡಿದ್ದಳು ನೋಡಿ...

ಉಡುಪಿ; ಸ್ನೇಹಿತೆಯ ಮನೆಗೇ ಕನ್ನ ಹಾಕಿದ ಕಳ್ಳಿ ಅಂದರ್: ಕಳ್ಳತನಕ್ಕೆ ಹೇಗೆಲ್ಲಾ ಪ್ಲ್ಯಾನ್ ಮಾಡಿದ್ದಳು ನೋಡಿ ಖತರ್ನಾಕ್ ಲೇಡಿ..

spot_img
- Advertisement -
- Advertisement -

ಉಡುಪಿ: ಕಾರ್ಕಳದಲ್ಲಿ ಡಿಸೆಂಬರ್ 3ರಂದು  ನಡೆದ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಟ್ವಾಳ ಅರಂಬೋಡಿ ಕಾಂತರಬೆಟ್ಟು ನಿವಾಸಿ ಪ್ರಸಾದ್‌ (34) ಹಾಗೂ ಶಿಬಾ (39) ಬಂಧಿತ ಆರೋಪಿಗಳು.

ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಂಗಿತ್ತುವಿನ ಉಷಾ ಜಗದೀಶ್‌ ಆಂಚನ್‌ ಅವರ ಮನೆಯಲ್ಲಿ ಡಿಸೆಂಬರ್ 3ರಂದು ಈ ಕಳವು ಪ್ರಕರಣ ನಡೆದಿತ್ತು. ಕಳ್ಳರು ಮನೆಯಲ್ಲಿದ್ದ 4.50 ಲಕ್ಷ ರೂ. ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆ ಸಹಿತ 9,75,000 ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮನೆಯವರು ಮೆಹಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಕಳ್ಳರು ಅಡುಗೆ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ನಡೆಸಿದ್ದರು. ಅಂದ್ಹಾಗೆ.ಕಳ್ಳತನವಾದ ಮನೆಯ ಮಾಲಕಿ ಉಷಾ ಅಂಚನ್‌ ಹಾಗೂ ಕಳ್ಳತನಕ್ಕೆ ಸಹಕರಿಸಿದ ಶಿಬು ಹಲವು ವರ್ಷಗಳ ಪರಿಚಯಸ್ಥರು. ಆಪ್ತ ಸ್ನೇಹಿತೆಯರು. ಇಬ್ಬರ ಮನೆಗಳ ನಡುವಿನ ಅಂತರ ಸುಮಾರು 50 ಮೀ. ದೂರವಷ್ಟೆ ಇರುವುದು.ಮೊದಲಿನಿಂದಲೂ ಅವರಿಬ್ಬರು ಜತೆಯಾಗಿ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು.ಕಳ್ಳತನವಾದ ದಿನ ರಾತ್ರಿ ಇಬ್ಬರು ಜತೆಯಾಗಿ ಪರಿಸರದಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಮೊದಲು ತೆರಳುವಾಗ ಸ್ಕೂಟಿಯಲ್ಲಿ ತೆರಳುತಿದ್ದರು. ಅವತ್ತು ನಾವು ನಡೆದಾಡಿಕೊಂಡು ಆರಾಮವಾಗಿ ಮಾತಾಡಿಕೊಂಡು ಹೋಗುವ ಅಂದಿದ್ದಳು. ಆಕೆಯ ಮರುಳು ಮಾತಿಗೆ ಉಷಾ ಒಪ್ಪಿ ನಡೆದುಕೊಂಡೆ ಇಬ್ಬರು ಇನ್ನಿತರರ ಜತೆ ಸೇರಿ ಹೋಗಿದ್ದರು.

ದೊಡ್ಡ ಕರಿಮಣಿ ಹಾಕುವುದು ಬೇಡವೆಂದೂ ಶಿಬಾ ಹೇಳಿದ್ದಳು. ಅದರಂತೆ ಅದನ್ನು ಮನೆಯಲ್ಲೇ ಇರಿಸಿ ಸಣ್ಣ ಕರಿಮಣಿ ಹಾಕಿದ್ದರು.ಮೊದಲೇ ಯೋಜನೆ ರೂಪಿಸಿದ್ದ ಶಿಬಾ ಇನ್ನೊಂದು ಕಡೆ ಸಂಬಂದಿ ಪ್ರಸಾದ್‌ಗೆ ಮಾಹಿತಿ ನೀಡಿದ್ದಳು. ಆಕೆಯ ಮಾಹಿತಿ ಆಧರಿಸಿ ಆತ ಕಳ್ಳತನಗೈದಿದ್ದ. ಕಳ್ಳತನವಾದ ಬಳಿಕವೂ ಆರೋಪಿತೆ ಶಿಬು ನಾಟಕವಾಡಿದ್ದಳು. ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್‌ ಹಾಕೆ ಮಚ್ಚಿಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಪ್ರಸಾದ್‌ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡುಬಿದಿರೆ ಠಾಣೆಯಲ್ಲಿ ಸುದರ್ಶನ ಜೈನ್‌ ಅವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು

- Advertisement -
spot_img

Latest News

error: Content is protected !!