Sunday, April 28, 2024
Homeತಾಜಾ ಸುದ್ದಿಬೈಕ್ ಸವಾರನ ಸಮೇತ ​ ಟೋಯಿಂಗ್​ ಮಾಡಿದ ಟ್ರಾಫಿಕ್ ಸಿಬ್ಬಂದಿಗೆ ಶಾಕ್​ :...

ಬೈಕ್ ಸವಾರನ ಸಮೇತ ​ ಟೋಯಿಂಗ್​ ಮಾಡಿದ ಟ್ರಾಫಿಕ್ ಸಿಬ್ಬಂದಿಗೆ ಶಾಕ್​ : ನೆಟ್ಟಿಗರ ಆಕ್ರೋಶ

spot_img
- Advertisement -
- Advertisement -

ಪುಣೆ: ಬೈಕ್ ಜತೆ ಸವಾರನನ್ನು ಟೋಯಿಂಗ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟೋಯಿಂಗ್​ ಸಿಬ್ಬಂದಿ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು ನಾನ್​ ಪಾರ್ಕಿಂಗ್​​ ವಿಭಾಗದಲ್ಲಿ ನಿಲ್ಲಿಸಿದ್ದ ವಾಹನವನ್ನು ಟೋಯಿಂಗ್​ ಮಾಡಲು ಆರಂಭಿಸಿದಾಗ ಆತನೇ ಓಡಿಬಂದು ದ್ವಿಚಕ್ರ ವಾಹನದ ಮೇಲೇರಿದ ಎಂದು ತಿಳಿಸಿದ್ದಾರೆ.

ಈ ಘಟನೆ ಮಹಾರಾಷ್ಟ್ರದ ಪುಣೆಯ ನಾನಾಪೇಟ್​ ಏರಿಯಾದಲ್ಲಿ ಗುರುವಾರ ನಡೆದಿದೆ. ಸಮರ್ಥ್​ ಟ್ರಾಫಿಕ್​ ಶಾಖೆಯ ಪೊಲೀಸ್​ ಮ್ಯಾನ್​ಗಳು ಮತ್ತು ಗುತ್ತಿಗೆ ನೌಕರರು ಟೋಯಿಂಗ್​ ವ್ಯಾನ್​ನಿಂದ ನಾನ್​ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ ವಾಹನಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಸಂಚಾರ ಪೊಲೀಸ್​ ವಿಭಾಗದ ಡಿಸಿಪಿ ರಾಹುಲ್​ ಶ್ರೀರಾಮೆ ಹೇಳಿದ್ದಾರೆ.

ದ್ವಿಚಕ್ರ ವಾಹನವನ್ನು ಬಹುತೇಕ ಮೇಲೆತ್ತಲಾಗಿತ್ತು. ಅಷ್ಟರಲ್ಲಿ ಬೈಕ್​ ಸವಾರ ಬಂದು ಬೈಕ್​ ಮೇಲೇರಿದ. ಕೆಳಗೆ ಇಳಿಯುವಂತೆ ಪೊಲೀಸ್​ ಸಿಬ್ಬಂದಿ ಸಾಕಷ್ಟು ಮನವಿ ಮಾಡಿಕೊಂಡು. ಆದರೆ, ಆತ ಕೆಳಗಿಳಿಯಲಿಲ್ಲ. ಆತನ ಸಹ ಬೈಕ್​ ಕೆಳಗಿಳಿಸುವಂತೆ ಕೇಳಿಕೊಂಡ ಆದರೆ, ನಿಯಮ ಉಲ್ಲಂಘನೆ ಆಗಿರುವುದು ಸ್ಪಷ್ಟವಾದ್ದರಿಂದ ಸಿಬ್ಬಂದಿ ನಿರಾಕರಿಸಿದರು. ಬಳಿಕ ಬೈಕ್​ ಸವಾರನ ಸಮೇತ ವಾಹನವನ್ನು ವ್ಯಾನ್​ ಒಳಗಡೆ ಇಳಿಸಲಾಯಿತು ಎಂದು ಡಿಸಿಪಿ ತಿಳಿಸಿದರು.

ಕೊನೆಗೆ ಸವಾರ ಕ್ಷಮೆಯಾಚಿಸಿ, ದಂಡವನ್ನು ಪಾವತಿಸಿದರು. ಇದೇ ವೇಳೆ ಬೈಕ್​ ಸವಾರ ಸಮೇತ ಟೋಯಿಂಗ್​ ಮಾಡಿದ ಗುತ್ತಿಗೆ ಸಿಬ್ಬಂದಿ ಮತ್ತು ತಂಡದ ಭಾಗವಾಗಿದ್ದ ಟ್ರಾಫಿಕ್ ಪೋಲೀಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.

- Advertisement -
spot_img

Latest News

error: Content is protected !!